ಮಡಿಕೇರಿ ಫೆ.2 : ರಾಷ್ಟ್ರದ ಅಖಂಡತೆಗಾಗಿ ಶ್ರಮಿಸುವ ಚಿಂತನೆ ಮತ್ತು ವಿಭಜನೆಯ ಮನಸ್ಥಿತಿಗಳ ನಡುವೆ ಮುಂಬರುವ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದ ಕಾವೇರಿ ಹಾಲ್ ನಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಮತ್ತು ನೂತನ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ದೇಶ ವಿಭಜನೆಯ ಕುರಿತಾಗಿ ಮಾತನಾಡಿದ್ದಾರೆ. ಅದು ಕೇವಲ ಅವರೊಬ್ಬರ ಮಾತಲ್ಲ, ಬದಲಾಗಿ ಒಟ್ಟು ಕಾಂಗ್ರೆಸ್ ಮನಸ್ಥಿತಿಯದ್ದೆಂದು ಟೀಕಿಸಿದರು.
ಇಡೀ ರಾಷ್ಟçವನ್ನು ಒಂದಾಗಿ ಬೆಸೆಯುವ ಬಿಜೆಪಿಯ ಉದಾತ್ತ ಚಿಂತನೆ ಮತ್ತು ವಿಭಜನೆಯ ಕಾಂಗ್ರೆಸ್ ಚಿಂತನೆಗಳು ಮುಂಬರುವ ಚುನಾವಣೆಯಲ್ಲಿ ಮುಖಾಮುಖಿಯಾಗಲಿದೆ. ಮಂಡ್ಯದ ಖಾಸಗಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದನ್ನು ತೆರವುಗೊಳಿಸಿರುವ ಘಟನೆಯನ್ನು ಉಲ್ಲೇಖಿಸಿದ ಶ್ರೀನಿವಾಸ ಪೂಜಾರಿ ಅವರು, ಮುಂಬರುವ ಚುನಾವಣೆ ಹನುಮ ಭಕ್ತರ ಹಾಗೂ ಟಿಪ್ಪು ಭಕ್ತರ ನಡುವಿನದ್ದಾಗಿರುತ್ತದೆ ಎಂದರು.
ಜಮ್ಮು ಕಾಶ್ಮೀರದದಲ್ಲಿದ್ದ 370ನೇ ವಿಧಿಯನ್ನು ರದ್ದುಗೊಳಿಸಬೇಕೆನ್ನುವ ಬೇಡಿಕೆ ಅಂದಿನ ಜನಸಂಘದ ನಾಯಕರದ್ದಾಗಿತ್ತಾದರು, ಅದು ಈಡೇರಬಹುದೆನ್ನುವ ಭಾವನೆಗಳಿರಲಿಲ್ಲ. ಅದೇ ರೀತಿ ತೊಂಭತ್ತರ ದಶಕದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರು ರಾಮನ ರಥ ಯಾತ್ರೆಯನ್ನು ಮಾಡುವ ಹಂತದಲ್ಲಿ ಮುಂದೊಮ್ಮೆ ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ತಲೆ ಎತ್ತಬಹುದೆಂದು ಊಹಿಸಿರಲಿಲ್ಲ. ಅಂತಹ ಪರಿಸ್ಥಿತಿಗಳಿಂದ ಹೊರ ಬಂದು ಭಾರತೀಯ ಜನತಾ ಪಾರ್ಟಿ ಅಗಾಧವಾಗಿ ಬೆಳೆೆದು ನಿಂತಿದ್ದು, ಶ್ರೀಸಾಮಾನ್ಯರನ್ನು ತಲುಪಿದ ಪಕ್ಷವಾಗಿದೆ. ಹಿರಿಯರ ಪರಿಶ್ರಮಗಳಿಂದ ಬೆಳೆದು ನಿಂತ ಪಕ್ಷದ ಮೂಲಕ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳಾದ ಬಳಿಕ ಸಾಧಿಸಿದ ಅಭಿವೃದ್ಧಿಗಳು ಇಂದು ಇಡೀ ಜಗತ್ತೆ ದಿಗ್ಭçಮೆಗೊಳ್ಳುವ ರೀತಿಯಲ್ಲಿ ಭಾರತ ಬೆಳೆದಿದೆ. ‘ಇದು ಬದಲಾದ ಭಾರತ’ವೆಂದು ಸಂತಸ ವ್ಯಕ್ತಪಡಿಸಿದರು.
ಕನಸು ನನಸಾಗಿದೆ- ರಾಮ ಮಂದಿರಕ್ಕೆ ದಶಕಗಳ ಹಿಂದೆ ಸಂಗ್ರಹಿಸಿದ ಇಟ್ಟಿಗೆ, ಕಬ್ಬಿಣದಿಂದ ಮಾಡಿದ್ದೇನು ಎನ್ನುವ ಪ್ರಶ್ನೆಗಳು ಕೇಳಿ ಬರುತಿತ್ತು. ಪ್ರಸ್ತುತ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಮ್ಮ ಬದುಕಿನ ಅವಧಿಯಲ್ಲೆ ನಡೆದಿರುವ ಹೆಮ್ಮೆ ಸಂತಸ ತಮ್ಮದಾಗಿದ್ದು, ಹಿಂದೆ ಕಂಡಿದ್ದ ಕನಸು ಇಂದು ನನಸಾಗಿದೆಯೆಂದು ನುಡಿದರು.
ಜಮ್ಮು ಕಾಶ್ಮೀರದ ಲಾಲ್ ಚೌಕ್‌ನಲ್ಲಿ ‘ನೀವು ತಾಯಿಯ ಎದೆ ಹಾಲು ಕುಡಿದವರಾಗಿದ್ದರೆ ತ್ರಿವರ್ಣ ಧ್ವಜ ಹಾರಿಸಿ’ ಎನ್ನುವ ಭಯೋತ್ಪಾಕರ ಸವಾಲುಗಳನ್ನು ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಯಶಸ್ವಿಯಾಗಿ ಮೆಟ್ಟಿ ನಿಂತು, ಅಲ್ಲಿನ 370ನೇ ವಿಶೇಷ ಸ್ಥಾನಮಾನಗಳನ್ನು ತೆರವುಗೊಳಿಸಿರುವುದಲ್ಲದೆ, ಅಂದಿನ ಭಯೋತ್ಪಾದಕರ ಸವಾಲಿಗೆ ಉತ್ತರವೆಂಬAತೆ ಅಲ್ಲಿನ ಕಚೇರಿಗಳಲ್ಲಿ ಬೆಳಗ್ಗೆ ಎಂಟು ಗಂಟೆಗೆ ತ್ರಿವರ್ಣ ಧ್ವಜ ಹಾರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಅಫ್ಘಾನಿಸ್ತಾನ ಭಯೋತ್ಪಾಕರ ಹಿಡಿತಕ್ಕೆ ಸಿಕ್ಕಿದ ಹಂತದಲ್ಲಿ ನೆಲೆ ಕಳೆದುಕೊಂಡ ಅಲ್ಲಿನ ಭಾರತೀಯ ಮೂಲದವರಿಗೆ ‘ಪೌರತ್ವ ತಿದ್ದುಪಡಿ’ ಕಾಯ್ದೆಯ ಮೂಲಕ ಭಾರತದಲ್ಲಿ ನೆಲೆಯೊದಗಿಸಲು ಸಾಧ್ಯವಾಗಿದೆ. ಇದು ಬದಲಾದ ಭಾರತವೆಂದು ಶ್ರೀನಿವಾಸ ಪೂಜಾರಿ ಹೇಳಿದರು.
ರಾಜ್ಯ ಬರದ ಸಂಕಷ್ಟದಲ್ಲಿ ಸಿಲುಕಿರುವ ಹಂತದಲ್ಲಿ ಕೇಂದ್ರದತ್ತ ಬೊಟ್ಟು ಮಾಡಿ ಪರಿಹಾರ ನೀಡಿಲ್ಲವೆಂದು ಆರೋಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಎಷ್ಟು ಪರಿಹಾರ ಒದಗಿಸಿದ್ದಾರೆ ಎಂದು ಪ್ರಶ್ನಿದರು. ಇದೀಗ ಬಿಡುಗಡೆ ಮಾಡಿರುವ 350 ಕೋಟಿ ರೂ. ಪರಿಹಾರದಲ್ಲಿ ಶೇ.75 ಭಾಗ ಕೇಂದ್ರದ್ದೇ ಆಗಿದೆ. ಇತ್ತೀಚೆಗೆ ಮಾಗಡಿ ಶಾಸಕರು ಮುಂಬರುವ ಚುಣಾವಣೆÉಯಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ದರೆ ಗ್ಯಾರಂಟಿ ರದ್ದುಮಾಡಿವುದಾಗಿ ಕಾಂಗ್ರೆಸ್‌ನ ಆಂತರ್ಯದ ಮಾತುಗಳನ್ನಾಡಿದ್ದಾರೆ. ಇದು ನಿಜವೂ ಹೌದು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕಾಂಗ್ರೆಸ್‌ಗೂ ಖಚಿತವಾಗಿದೆ ಎಂದು ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಮುಂದಿನ ಇಪ್ಪತ್ತೈದು ವರ್ಷ ಭಾರತಕ್ಕೆ ಅಮೃತ ಕಾಲವೆಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ. ಅದಕ್ಕೆ ಪೂರಕವಾಗಿ 2047ರ ಹೊತ್ತಿಗೆ ವಿಕಸಿತ ಭಾರತದ ಪರಿಕಲ್ಪನೆಯ ಸಾಕಾರಕ್ಕೆ ಮುನ್ನುಡಿ ಬರೆಯುವ ಆಯವ್ಯಯವನ್ನು ಇದೀಗ ಕೇಂದ್ರ ಸರ್ಕಾರ ಮಂಡಿಸಿದೆಯೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಸ್ವಾತಂತ್ರಾö್ಯ ನಂತರದ ಅವಧಿಯ ಸುಮಾರು 56 ವರ್ಷಗಳ ಕಾಲ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತವಿತ್ತು, ಆದರೆ ಕೇವಲ ಒಂಭತ್ತೂವರೆ ವರ್ಷಗಳ ಅವಧಿಯ ಮೋದಿ ನೇತೃತ್ವದ ಸರ್ಕಾರ ಅದ್ವಿತೀಯ ಕಾರ್ಯಗಳನ್ನು ಮಾಡಿದೆ. ಇಡೀ ವಿಶ್ವವೆ ಭಾರತವನ್ನು ವಿಶ್ವ ಗುರುವಾಗಿ ನೋಡುವ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದರು.
::: ರವಿ ಕಾಳಪ್ಪಗೆ ಅಧಿಕಾರ :::
ಕೊಡಗು ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರಿಗೆ ಹಿಂದಿನ ಅಧ್ಯಕ್ಷ ರಾಬಿನ್ ದೇವಯ್ಯ ಅವರು ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಪಕ್ಷದ ಮುಖಂಡರುಗಳ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಪಕ್ಷದ ಮುಖಂಡರು ಹಾಗೂ ಮಂಗಳೂರು ಪ್ರಬಾರ ಉದಯ ಕುಮಾರ್ ಶೆಟ್ಟಿ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ರಾಜ್ಯ ಕಾರ್ಯಕಾರಿಣಿ ಸದಸ್ಯರುಗಳಾದ ರೀನಾ ಪ್ರಕಾಶ್, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ ಉಪಸ್ಥಿತರಿದ್ದರು. ಡೀನಾ ಹಾಗೂ ಹೇಮಾವತಿ ಪ್ರಾರ್ಥಿಸಿದರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲ್ಲೂರಿಕೊಪ್ಪ ಮಾದಪ್ಪ ಸ್ವಾಗತಿಸಿದರು.
Breaking News
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*
- *ದೇಶ ದ್ರೋಹದ ಪ್ರಕರಣ ದಾಖಲಿಸಲು ಕೆ.ಜಿ.ಬೋಪಯ್ಯ ಆಗ್ರಹ*
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*