ಮಡಿಕೇರಿ ಫೆ.2 NEWS DESK : ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಹಂತದಲ್ಲಿ ಆಂಬ್ಯುಲೆನ್ಸ್ ವಾಹನದಲ್ಲೆ ಮಗುವಿಗೆ ಜನ್ಮ ನೀಡಿದ ಪ್ರಕರಣ ಸೋಮವಾರಪೇಟೆಯ ಬಾಣಾವರದಲ್ಲಿ ನಡೆದಿದೆ.
ಬಾಣಾವರದ ನಿವಾಸಿ ಬೇಬಿ ಎಂಬುವವರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಸಂದರ್ಭ ಅವರನ್ನು 108 ಆಂಬ್ಯುಲೆನ್ಸ್ನಲ್ಲಿ, ಬಾಣಾವರದಿಂದ ಅಬ್ಬೂರುಕಟ್ಟೆಗೆ ಅರಣ್ಯದ ಹಾದಿಯಲ್ಲಿ ಕರೆದೊಯ್ಯಲಾಗುತಿತ್ತು.
ಅರಣ್ಯ ಮಾರ್ಗದಲ್ಲಿ ಬೇಬಿ ಅವರ ಪರಿಸ್ಥಿತಿ ಆಂಬ್ಯುಲೆನ್ಸ್ನಲ್ಲ್ಲಿದ್ದ ಸ್ಟಾಪ್ ನರ್ಸ್ ಮಮತಾ ಹಾಗೂ ಅರುಣ್ ಕುಮಾರ್ ಅವರು ಗಮನಿಸಿ, ತಕ್ಷಣ ವಾಹನವನ್ನು ನಿಲ್ಲಿಸಲು ಸೂಚಿಸಿದರು. ಬಳಿಕ ಕಾಡಿನ ಹಾದಿಯ ನಡುವೆಯೇ ವಾಹನದಲ್ಲೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಅವರನ್ನು ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.










