ಮಡಿಕೇರಿ ಫೆ.3 NEWS DESK : ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ‘ಬೆನ್ನು ಹುರಿ’ ಹಾನಿಯಿಂದ ಉಂಟಾಗುವ ವಿಕಲತೆಯಿಂದ ಬಳಲುತ್ತಿರುವರಿಗೆ ತಾವೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಪ್ರೇರಣೆಯನ್ನು ನೀಡುವ ನಿಟ್ಟಿನಲ್ಲಿ ಫೆ.7 ರಿಂದ 9 ರವರೆಗೆ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ‘ಪುನಶ್ಚೇತನ ಶಿಬಿರ’ವನ್ನು ಆಯೋಜಿಸಲಾಗಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಹಾಲಿ ಖಜಾಂಚಿಗಳಾದ ವಿನಾಯಕ ರಾವ್ ಸ್ವತಃ ಬೆನ್ನುಹುರಿಗೆ ಅಪಘಾತದಿಂದ ಉಂಟಾದ ಹಾನಿಯಿಂದ ಪುನಶ್ಚೇತನಗೊಂಡಿರುವ ವಿನಾಯಕ ರಾವ್ ಮಡಿಕೇರಿಯ ವಿಕಾಸ ಜನಸೇವಾ ಟ್ರಸ್ಟ್‌ನ ಸಹಕಾರದೊಂದಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಸೇವಾಭಾರತಿ ಸಂಸ್ಥೆ 2004 ರಲ್ಲಿ ಆರೋಗ್ಯ, ಮಹಿಳಾ ಸಬಲೀಕರಣ ಮತ್ತು ದಿವ್ಯಾಂಗರ ಕ್ಷೇತ್ರದಲ್ಲಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದರು, 2018 ರ ಬಳಿಕ ಅಪಘಾತದಿಂದ ಬೆನ್ನುಹುರಿಗೆ ಪೆಟ್ಟಾಗಿ ಶಾಶ್ವತ ಅಂಗ ವಿಕಲತೆಯ ಸಂಕಷ್ಟಕ್ಕೆ ಒಳಗಾದವರಿಗೆ ಪುನಶ್ಚೇತನವನನ್ನು ನೀಡುವ ಕೆಲಸವನ್ನು ಮಾಡುತ್ತಾ ಬರುತ್ತಿದೆ.
ಸೇವಾಭಾರತಿ ಪ್ರಸ್ತುತ ಏಳು ಜಿಲ್ಲೆಗಳಲ್ಲಿ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿದೆ. ಕೊಡಗು ಜಿಲ್ಲೆಯಲ್ಲಿ ಬೆನ್ನು ಹುರಿಯ ಸಮಸ್ಯೆಯಿಂದ ವಿಕಲತೆಯನ್ನು ಹೊಂದಿದ 36 ಮಂದಿಯನ್ನು ಗುರುತಿಸಲಾಗಿದೆ. ಇವರಲ್ಲಿ 11 ಮಂದಿಗೆ ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು, 8 ಮಂದಿಗೆ ವೀಲ್ ಚೇರ್, 16 ಮಂದಿಗೆ ಸ್ವಯಂ ಚಿಕಿತ್ಸಾ ಕಿಟ್‍ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ದಿವ್ಯಾಂಗರನ್ನು ಮುಖ್ಯವಾಹಿನಿಗೆ ಬರುವಂತೆ ಮಾಡಿ ಅವರಿಗೆ ಎಲ್ಲರಂತೆ ಬದುಕಲು ಧೈರ್ಯ ತುಂಬಲಾಗುತ್ತದೆ. ಜನ ಸಾಮಾನ್ಯರಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಮೂಡಿಸಲು ಶಿಬಿರದ ಕೊನೆಯ ದಿನವಾದ ಫೆ.9 ರಂದು ಬೆಳಗ್ಗೆ 9 ಗಂಟೆಗೆ ಅಶ್ವಿನಿ ಆಸ್ಪತ್ರೆಯಿಂದ ಜನರಲ್ ತಿಮ್ಮಯ್ಯ ವೃತ್ತವನ್ನು ಹಾದು, ಮರಳಿ ಆಸ್ಪತ್ರೆಗೆ ಬರುವ ಗಾಲಿಕುರ್ಚಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಶಿಬಿರದಲ್ಲಿ ಪ್ರಮುಖವಾಗಿ ಬೆನ್ನು ಹುರಿ ಸಮಸ್ಯೆಯಿಂದ ವಿಕಲಚೇತನರಾಗಿರುವವರ ಚಟುವಟಿಕೆ ಹೆಚ್ಚಿಸಿ, ದೀರ್ಘಾವಧಿಯಲ್ಲಿ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಣೆ ನೀಡಲಾಗುತ್ತದೆ. ಸಂಸ್ಥೆಯ ಮೂಲಕ ಈಗಾಗಲೇ ಸುಮಾರು 178 ಮಂದಿ ಪುನಶ್ಚೇತನವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಲ್ಲಿ ಬೆನ್ನು ಹುರಿ ತೊಂದರೆಗೊಳಗಾದ 604 ಮಂದಿಯನ್ನು ಗುರುತಿಸಿ ಅವರನ್ನು ಪುನಶ್ಚೇತನ ಮಾಡುವ ಕಾರ್ಯ ನಿರಂತರವಾಗಿದೆ ಎಂದು ವಿನಾಯಕ ರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಕಾಸ್ ಜನಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಪದ್ಮಶ್ರೀ ರಾಣಿ ಮಾಚಯ್ಯ, ಖಜಾಂಚಿ ಬಿ.ಕೆ.ನವೀನ್ ಹಾಗೂ ಸೇವಾ ಭಾರತಿ ಕೊಡಗಿನ ಹಿರಿಯ ಸಂಪರ್ಕಾಧಿಕಾರಿ ಆರ್.ಮನು ಉಪಸ್ಥಿತರಿದ್ದರು.
Breaking News
- *ಕೊಡಗಿನ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿ : ಅಧಿಕಾರಿಗಳಿಗೆ 2 ತಿಂಗಳ ಗಡುವು*
- *ಸಿಎನ್ಸಿಯಿಂದ “ಕೊಡವ ನ್ಯಾಷನಲ್ ಡೇ” ಮತ್ತು ಸಂವಿಧಾನ ದಿನಾಚರಣೆ : 9 ಪ್ರಮುಖ ನಿರ್ಣಯಗಳ ಮಂಡನೆ*
- *ಮಡಿಕೇರಿ : ನ.27 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ : ಸಿವಿಲ್ ನ್ಯಾಯಾಧೀಶೆ ಶುಭ*
- *ವಿರಾಜಪೇಟೆಯಲ್ಲಿ ನ.27 ರಂದು ಕಾವೇರಿ ಕಾರ್ನಿವಾಲ್ ಫೆಸ್ಟ್*
- *ಚೆಟ್ಟಳ್ಳಿ ಗ್ರಾ.ಪಂ ಉಪಚುನಾವಣೆ : ಅಯ್ಯಂಡ್ರ ಭಾಗೀರಥಿ ಗೆಲುವು*
- *ಸಹಕಾರ ತರಬೇತಿ (ಡಿಸಿಎಂ)ಗೆ ಅರ್ಜಿ ಆಹ್ವಾನ*
- *ತ್ಯಾಗರಾಜ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ : ಪರಿಸರರೊಂದಿಗೆ ಮಕ್ಕಳು ಬೆಳೆಯಬೇಕು : ಗೀತಾ ಗಿರೀಶ್*
- *ಮಡಿಕೇರಿಯಲ್ಲಿ ಸಂವಿಧಾನ ದಿನಾಚರಣೆ : ರಾಷ್ಟ್ರದ ಅಭಿವೃದ್ಧಿಗೆ ಸಂವಿಧಾನ ಪಾತ್ರ ಪ್ರಮುಖ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ*
- *ಪುತ್ತೂರು : ವಿಸಿಇಟಿಯಲ್ಲಿ ಮಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ*