ಮಡಿಕೇರಿ ಫೆ.6 NEWS DESK : ಗೋಣಿಕೋಪ್ಪಲಿನ ಕಾವೇರಿ ಕಾಲೇಜಿನಲ್ಲಿ ಫೆ.25 ರಂದು ಬೆಳಗ್ಗೆ 8 ಗಂಟೆಯಿಂದ ಮುಖ್ಯಾಲಯ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಬೆಂಗಳೂರು ಇವರ ವತಿಯಿಂದ ಮಾಜಿ ಸ್ಯೆನಿಕರ ರ‍್ಯಾಲಿ ನಡೆಯಲಿದೆ.
ಕೊಡಗು ಜಿಲ್ಲೆಯ ಎಲ್ಲಾ ಮಾಜಿ ಸ್ಯೆನಿಕರು ಮತ್ತು ಅವರ ಅವಲಂಬಿತರು ಕುಂದುಕೊರತೆಗಳು ಹಾಗೂ ಇತರೆ ಪಿಂಚಣಿ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮ ಮೂಲ ಸೇನಾ ದಾಖಲಾತಿಗಳೂಂದಿಗೆ ಆಧಾರ್ ಕಾರ್ಡ್, ಪಿಂಚಣಿ ಪಡೆಯುತ್ತಿರುವ ಬ್ಯಾಂಕ್ ಖಾತೆಯ ಪಾಸ್ ಪುಸ್ತಕ, ಪಾನ್ ಕಾರ್ಡ ಹಾಗೂ ಬ್ಯಾಂಕ್ ಖಾತೆ, ಸ್ಪರ್ಶ್, ಮತ್ತು ಆಧಾರ್‍ಗೆ ನೋಂದಣಿಯಾದ ಮೊಬ್ಯೆಲ್ ಸಂಖ್ಯೆ ಹಾಗೂ ಎಲ್ಲಾ ದಾಖಲಾತಿಗಳ ನೆರಳಚ್ಚು ಪ್ರತಿಗಳೊಂದಿಗೆ ಫೆ.16 ರೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮುಖ್ಯ ರಸ್ತೆ, ಮಡಿಕೇರಿ ಇವರಲ್ಲಿ ತಮ್ಮ ತಮ್ಮ ಕುಂದುಕೂರತೆಗಳನ್ನು ನೋಂದಾಯಿಸಿಕೊಳ್ಳಬೇಕು.
ತಮ್ಮ ಎಲ್ಲಾ ದಾಖಲಾತಿಗಳನ್ನು ರ್ಯಾಲಿಯ ದಿನದಂದು ತರುವುದು. ಕೊಡಗು ಜಿಲ್ಲೆಯ ಎಲ್ಲಾ ಮಾಜಿ ಸ್ಯೆನಿಕರು ಮತ್ತು ಅವರ ಅವಲಂಬಿತರು ಇದರ ಸದುಪಯೂಗ ಪಡೆದುಕೋಳ್ಳಬೇಕೆಂದು ಈ ಮೂಲಕ ಕೋರಲಾಗಿದೆ ಎಂದು ಕರ್ನಲ್ ವೆಟರನ್ ಮುಖ್ಯಾಲಯ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Breaking News
- *ನ.22 ರಂದು ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ*
- *ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ*
- *ನ.23 ರಂದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಬಹುಮಾನ ದಿನ*
- *ಬ್ರೆಜಿಲ್ನಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ*
- *ಸೋಮವಾರಪೇಟೆ : ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಅಂಗಾರಕ ಸಂಕಷ್ಟಿ ಪೂಜೆ*
- *ಕರಿಕೆಯಲ್ಲಿ ಇನ್ನೂ ಸೆರೆಯಾಗದ ಚಿರತೆ : ಮತ್ತೆ ಸಾಕುನಾಯಿ ಮೇಲೆ ದಾಳಿ : ಬೋನ್ ಅಳವಡಿಸುವ ಭರವಸೆ*
- *ಸೋಮವಾರಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ*
- *ವಿರಾಪೇಟೆ : ಕಾವೇರಿ ಶಾಲೆಯಲ್ಲಿ ಸಂಸ್ಥಾಪಕರ ದಿನ ಆಚರಣೆ*
- *ವಿರಾಜಪೇಟೆ : ನ.21 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ನ.21 ರಂದು ಮಡಿಕೇರಿಯ ವಿದ್ಯುತ್ ವ್ಯತ್ಯಯ*