ಮಡಿಕೇರಿ ಫೆ.6 NEWS DESK : ಕುಶಾಲನಗರದ ದ್ವಿಚಕ್ರ ವಾಹನದ ಶೋರೂಂ ನಲ್ಲಿ ನಡೆದ ಕಲಹದಲ್ಲಿ ಕತ್ತರಿಯಿಂದ ಇರಿತಕ್ಕೊಳಗಾಗದ ಯುವಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಸಾಜಿದ್ (22) ಮೃತಪಟ್ಟ ಯುವಕನಾಗಿದ್ದಾನೆ. ಕತ್ತರಿಯಿಂದ ಹಲ್ಲೆ ನಡೆಸಿದ ಆರೋಪದಡಿ ಶೋರೂಂ ಮಾಲೀಕ ಶ್ರೀನಿಧಿ ಹಾಗೂ ಬೆಂಬಲ ನೀಡಿದ ಆರೋಪದಡಿ ಆತನ ಸ್ನೇಹಿತ ಅಲೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದ್ವಿಚಕ್ರ ವಾಹನದ ಸರ್ವಿಸ್ ಗೆಂದು ಫೆ.5 ರಂದು ತನ್ನ ಇಬ್ಬರು ಸ್ನೇಹಿತರೊಂದಿಗೆ ಸಾಜಿದ್ ಕುಶಾಲನಗರದ ಶೋರೂಂ ಗೆ ತೆರಳಿದ್ದಾಗ ಘಟನೆ ನಡೆದಿದೆ. ಶೋರೂಂ ಮಾಲೀಕ ಶ್ರೀನಿಧಿಯ ಕುರ್ಚಿಯಲ್ಲಿ ಸಾಜಿದ್ ಕುಳಿತ್ತಿದ್ದ ಎನ್ನುವ ಕಾರಣಕ್ಕೆ ಏರ್ಪಟ್ಟ ಕಲಹ ತಾರಕಕ್ಕೇರಿದೆ. ಈ ಸಂದರ್ಭ ಶ್ರೀನಿಧಿ ಕತ್ತರಿಯಿಂದ ಸಾಜಿದ್ ಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸಾಜಿದ್ ನನ್ನು ಕುಶಾಲನಗರ ಆಸ್ಪತ್ರೆಯಿಂದ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ತಕ್ಷಣ ಕಾರ್ಯಪ್ರವೃತ್ತರಾದ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶ್ರೀನಿಧಿ ಹಾಗೂ ಜೊತೆಯಲ್ಲಿದ್ದ ಆತನ ಸ್ನೇಹಿತ ಅಲೀಂ ನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
::: ಐಜಿ ಭೇಟಿ :::
ದಕ್ಷಿಣ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ತನಿಖಾಧಿಕರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
::: ಅಂತ್ಯ ಸಂಸ್ಕಾರ :::
ಇಂದು ಸಂಜೆ ಸಾಜಿದ್ ನ ಮೃತದೇಹವನ್ನು ಮಡಿಕೇರಿಯ ಗಣಪತಿ ಬೀದಿಯ ನಿವಾಸಕ್ಕೆ ತಂದು ಅಂತಿಮ ವಿಧಿ ವಿಧಾನಗಳ ನಂತರ ಖಬರಸ್ಥಾನದಲ್ಲಿ ಅಂತ್ಯ ಸಂಸ್ಕಾರ ನೆರವೇಸರಿಸಲಾಯಿತು. ಮೃತ ಯುವಕ ತಂದೆ ಶೌಕತ್, ತಾಯಿ ಉನೈಸ ಹಾಗೂ ಮೂವರು ಸಹೋದರರನ್ನು ಅಗಲಿದ್ದಾನೆ.
::: ಪರಿಹಾರಕ್ಕೆ ಒತ್ತಾಯ :::
ಮೃತ ಸಾಜಿದ್ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ನೀಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದ್ದಾರೆ.
Breaking News
- *ಬಿಜೆಪಿಯಿಂದ ದಿನಪೂರ್ತಿ ಧರಣಿ ಸತ್ಯಾಗ್ರಹ*
- *ರಾಜ್ಯ ಸರ್ಕಾರದ ವಿರುದ್ಧ ಜನ ಜಾಗೃತರಾಗಬೇಕು : ಕೊಡಗು ಬಿಜೆಪಿ ಎಸ್ಟಿ ಮೋರ್ಚಾ ಕರೆ*
- *ನ.22 ರಂದು ವಿಶೇಷ ಚೇತನರಿಗೆ ಆಟೋಟ ಸ್ಪರ್ಧೆ*
- *“ತೋಕ್ ನಮ್ಮೆ” ಪ್ರಯುಕ್ತ ರಾಜ್ಯ ಮಟ್ಟದ “ಕೋಕನಟ್ ಶೂಟಿಂಗ್”*
- *ತೋಳೂರು ಶೆಟ್ಟಳ್ಳಿಯಲ್ಲಿ “ಶರಣ ಸಂಸ್ಕೃತಿ” ವಿಚಾರಗೋಷ್ಠಿ : ವಚನಗಳು ಸುಂದರ ಜೀವನದ ದೀವಿಗೆಗಳು : ಮೆ.ನಾ.ವೆಂಕಟನಾಯಕ್ ಅಭಿಮತ*
- *ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ : ವಿರಾಜಪೇಟೆ ರೋಟರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾವಳಿ : ಮೂರ್ನಾಡು ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಚಾಂಪಿಯನ್*
- *ಪ್ರಬಂಧ ಸ್ಪರ್ಧೆ : ಬಿಳುಗುಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ರಹಿಯಾನ ದ್ವಿತೀಯ*
- *ನಾಪೋಕ್ಲು : ಕೆನರಾ ಬ್ಯಾಂಕ್ ನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಜನ್ಮ ದಿನಾಚರಣೆ*
- *ನ.22 ರಂದು ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ*