ಸುಂಟಿಕೊಪ್ಪ ಫೆ.7 NEWS DESK : ಪೊಲೀಸ್ ಇಲಾಖೆಯಿಂದ ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಸುಂಟಿಕೊಪ್ಪ ಜೆಸಿಐ ಸಂಸ್ಥೆ ವತಿಯಿಂದ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಶಾಲನಗರ ಡಿವೈಎಸ್ಪಿ ಗಂಗಾದರಪ್ಪ ಅವರು ಮಾತನಾಡಿ, ಮಕ್ಕಳು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿತುಕೊಂಡು ಪಾಲಿಸುವುದು ಮುಖ್ಯವೆಂದರು. ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ಅಪಘಾತಗಳನ್ನು ತಡೆಗಟ್ಟಲು ಸಾಧ್ಯವೆಂದರು.
ರಸ್ತೆ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾಗ ಅಪಘಾತಗಳು ಸಂಭವಿಸುತ್ತದೆ. ರಸ್ತೆ ಅಪಘಾತದಲ್ಲಿ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಸಾರಿಗೆ ಮತ್ತು ಪೊಲೀಸ್ ಇಲಾಖೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ವಾಹನ ಸಂಚಾರ ಮಾಡುವಾಗ ಹೆಚ್ಚಿನ ಜಾಗೃತೆ ವಹಿಸಬೇಕು. ಮಕ್ಕಳು ಮನೆಯಿಂದ ಶಾಲೆಗೆ ಮತ್ತು ಶಾಲೆಯಿಂದ ಮನೆಗೆ ತೆರಳುವ ಸಂದರ್ಭ ರಸ್ತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಲಹೆ ನೀಡಿದರು.
ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನಗಳನ್ನು ಚಾಲನೆ ಮಾಡುವ ವೇಳೆ ಮೊಬೈಲ್‍ನಲ್ಲಿ ಮಾತನಾಡಬಾರದು. ಕಾರುಚಾಲಕರು ಸೀಟು ಬೆಲ್ಟ್ ಧರಿಸಬೇಕು. ವಿದ್ಯಾರ್ಥಿಗಳು ಶಿಸ್ತು ಸಂಯಮದಿಂದ ಶಿಕ್ಷಣ ಪಡೆಯಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು, ಸಮಾಜದಲ್ಲಿ ಕಾನೂನು ಪಾಲಿಸದ ಯುವಕರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ತುರ್ತು ಸಂದರ್ಭ ಪೊಲೀಸ್ ಇಲಾಖೆಯಿಂದ ನೀಡಲಾದ ಸಂಖ್ಯೆಗೆ ಕರೆ ಮಾಡಿ ಎಂದು ಮಾಹಿತಿ ನೀಡಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಜೆಸಿಐ ಅಧ್ಯಕ್ಷ ಸಂಪತ್‍ಕುಮಾರ್, ಸದಸ್ಯರಾದ ದೇವಿ ಪ್ರಸಾದ್ ಕಾಯರ್ಮಾರ್, ಡೆನ್ನಿಸ್‍ಡಿಸೋಜ, ಪೆಲ್ಸಿ ಡೆನ್ನಿಸ್ ಡಿಸೋಜ, ಅರುಣ್‍ಕುಮಾರ್, ಸತೀಶ್‍ಕುಮಾರ್, ಪ್ರನೀತ್‍ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕಿಯರು ವಿದಾರ್ಥಿಗಳು ಉಪಸ್ಥಿತರಿದ್ದರು.
Breaking News
- *ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಆಂದೋಲನಕ್ಕೆ ಚಾಲನೆ*
- *ಕೊಡಗಿನ ನಾಲ್ವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪ್ರದಾನ*
- *71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ : ಹಿರಿಯರ ದೂರದೃಷ್ಟಿಯಿಂದ ಜಿಲ್ಲೆಯ ಸಹಕಾರ ಸಂಘಗಳು ಬಲಿಷ್ಠ : ಎ.ಕೆ.ಮನುಮುತ್ತಪ್ಪ*
- ಕೊಡಗು : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ : ಪುಸ್ತಕ ಅಧ್ಯಯನದಿಂದ ಜ್ಞಾನ ವೃದ್ಧಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ
- *ಮಡಿಕೇರಿಯಲ್ಲಿ ನವಜಾತ ಶಿಶು ಆರೈಕೆ ಸಪ್ತಾಹ : ನವಜಾತ ಶಿಶುವಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಿ : ಡಾ.ಮಧುಸೂಧನ್*
- *ಬಿಜೆಪಿಯಿಂದ ದಿನಪೂರ್ತಿ ಧರಣಿ ಸತ್ಯಾಗ್ರಹ*
- *ರಾಜ್ಯ ಸರ್ಕಾರದ ವಿರುದ್ಧ ಜನ ಜಾಗೃತರಾಗಬೇಕು : ಕೊಡಗು ಬಿಜೆಪಿ ಎಸ್‌ಟಿ ಮೋರ್ಚಾ ಕರೆ*
- *ನ.22 ರಂದು ವಿಶೇಷ ಚೇತನರಿಗೆ ಆಟೋಟ ಸ್ಪರ್ಧೆ*
- *“ತೋಕ್ ನಮ್ಮೆ” ಪ್ರಯುಕ್ತ ರಾಜ್ಯ ಮಟ್ಟದ “ಕೋಕನಟ್ ಶೂಟಿಂಗ್”*
- *ತೋಳೂರು ಶೆಟ್ಟಳ್ಳಿಯಲ್ಲಿ “ಶರಣ ಸಂಸ್ಕೃತಿ” ವಿಚಾರಗೋಷ್ಠಿ : ವಚನಗಳು ಸುಂದರ ಜೀವನದ ದೀವಿಗೆಗಳು : ಮೆ.ನಾ.ವೆಂಕಟನಾಯಕ್ ಅಭಿಮತ*