ಮಡಿಕೇರಿ ಫೆ.9 NEWS DESK : ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯದಿಂದ ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯು (ಪಿಎಂಎಫ್‍ಎಂಇ) 2020-21 ರಿಂದ ಪ್ರಾರಂಭವಾಗಿದೆ.
ಈ ಯೋಜನೆಯಡಿ ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ, ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ರೈತ ಉತ್ಪಾದಕ ಸಹಕಾರಿ ಸಂಘಗಳಿಗೆ ಅವುಗಳ ಸರಪಳಿಕೊಂಡಿಯೊಂದಿಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 18 ವರ್ಷ ಮೇಲ್ಪಟ್ಟ ಆಸಕ್ತ ಫಲಾನುಭವಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ವಿದ್ಯಾರ್ಹತೆಯ ಮಿತಿ ಇರುವುದಿಲ್ಲ. ಅರ್ಹ ಯೋಜನಾ ವೆಚ್ಚದ ಶೇ.35 ರಷ್ಟು ಮೌಲ್ಯದ ಸಾಲ-ಸಂಪರ್ಕವಿರುವ ಸಹಾಯಧನ ಜೊತೆಗೆ ಹೆಚ್ಚುವರಿ ಶೇ.15 ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನ ಒದಗಿಸಲಾಗುವುದು (ಗರಿಷ್ಠ ಮಿತಿ 15 ಲಕ್ಷಗಳು), ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹಿರಾತು, ಸಾಮಾನ್ಯ ಬ್ರಾಂಡ್ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮತ್ತಿತರಗಳಿಗೆ ಸರ್ಕಾರದಿಂದ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ.
ಆಸಕ್ತ ಫಲಾನುಭವಿಗಳು http://pmfme.mofpi.gov.in ಪೋರ್ಟಲ್ ಮೂಲಕ ಅರ್ಜಿ ನೋಂದಾಯಿಸಬಹುದು. ಹಾಗೂ ಫಲಾನುಭವಿಗಳ ದಾಖಲೆಗಳ ಕ್ರೋಢೀಕರಣ, ವಿಸ್ತøತ ಯೋಜನಾ ವರದಿ ತಯಾರಿಕೆ ಹಾಗೂ ಇತರೆ ಮಾರ್ಗದರ್ಶನಕ್ಕಾಗಿ ಈ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕೆ.ಜಿ.ನೀರಜಾ ದೂ.ಸಂ. 8861422540 ನ್ನು ನೇರವಾಗಿ ಸಂಪರ್ಕಿಸುವುದು ಹಾಗೂ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಪಿಎಂಎಫ್‍ಎಂಇ ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಮಡಿಕೇರಿ ರವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ್ ತಿಳಿಸಿದ್ದಾರೆ.













