ವಿರಾಜಪೇಟೆ ಫೆ.12 NEWS DESK : ಕರ್ನಾಟಕ ಸ್ಪೋಟ್ರ್ಸ್ ಡ್ಯಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋಟ್ರ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಜಮ್ಮು ಕಾಶ್ಮೀರದ ಅಭಿನವ ಸಭಾಂಗಣದಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಕೈಕೇರಿ ಗ್ರಾಮದ ಅಚ್ಚಪಂಡ ಶ್ರೇಯಾ ಬೋಜಮ್ಮ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಶಾಸ್ತ್ರೀಯ ನೃತ್ಯ ಹಾಗೂ ಜಾನಪದ ನೃತ್ಯ ವಿಭಾಗದಲ್ಲಿ ಭಾಗವಹಿಸಿ ಗೋಣಿಕೊಪ್ಪಲು ಕೈಕೇರಿ ಗ್ರಾಮದ ಅಚ್ಚಪಂಡ ಶ್ರೇಯಾ ಬೋಜಮ್ಮ 3 ಚಿನ್ನದ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಈಕೆ ಎಸ್.ಎಂ.ಎಸ್.ಶಾಲೆಯ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಚ್ಚಪಂಡ ಸುಬ್ರಮಣಿ ಹಾಗೂ ರೇಷ್ಮ ದಂಪತಿಯ ಪುತ್ರಿಯಾಗಿರುವ ಶ್ರೇಯಾ ಬೋಜಮ್ಮ 1 ವರ್ಷದಿಂದ ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಹಾಗೂ ಸಂಗೀತ ಸಂಸ್ಥೆಯ ಗುರುಗಳಾದ ವಿದುಷಿ ಹೇಮಾವತಿ ಕಾಂತ್‍ರಾಜ್ ಹಾಗೂ ಕಾವ್ಯಶ್ರೀ ಅವರ ಶಿಷ್ಯೆ.









