ವಿರಾಜಪೇಟೆ ಫೆ.21 NEWS DESK : ನೃತ್ಯ ಶಿಕ್ಷಕಿ ಪಿ.ಎನ್. ಚೈತ್ರ ಅವರಿಗೆ ಸುವರ್ಣ ಶ್ರೀ ಕನ್ನಡ ಪ್ರಶಸ್ತಿ ಲಭಿಸಿದೆ.
ಪಿ.ಎನ್. ಚೈತ್ರ ಅವರ ನೃತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.
ಇವರು ಹೆಗ್ಗಳ ಗ್ರಾಮದ ಪಿ.ಎ. ನಾಣು, ಪಿ.ಎನ್. ಪ್ರೇಮಾ ಅವರ ಪುತ್ರಿ. ವಿರಾಜಪೇಟೆಯ ವಿನಾಯಕ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.









