ವಿರಾಜಪೇಟೆ ಫೆ.12 NEWS DESK : ಜಮ್ಮುವಿನಲ್ಲಿ ನಡೆದ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಬಾಚಮಂಡ ಕೆ. ವಿಮರ್ಶ 1 ಚಿನ್ನ, 2 ಕಂಚಿನ ಪದಕ ಗಳಿಸಿ ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಮರ್ಶ ಅವರು ಭೂತಾನ್ನಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರು ವಿರಾಜಪೇಟೆಯ ನಿಸರ್ಗ ಲೇಔಟ್ ನಿವಾಸಿ ಬಾಚಮಂಡ ಕಿಶೋರ್ ಹಾಗೂ ವಕೀಲರಾದ ಅನುಪಮ ಕಿಶೋರ್ ಅವರ ಪುತ್ರಿ. ಇವರು ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ 7 ತರಗತಿಯಲ್ಲಿ ಓದುತ್ತಿದ್ದಾರೆ. ವಿರಾಜಪೇಟೆಯ ಟೀಂ ಇಂಟೋಪೀಸ್ ನೃತ್ಯ ಶಾಲೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದು ತರಬೇತುದಾರರಾದ ವಿಷ್ಣುಇವರಿಗೆ ನೃತ್ಯ ತರಬೇತಿ ನೀಡುತ್ತಿದ್ದಾರೆ.










