ಮಡಿಕೇರಿ ಫೆ.17 : ವಿರಾಜಪೇಟೆಯ ಕಾವೇರಿ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ 1ನೇ ಹಾಗೂ 2ನೇ ತರಗತಿಯ ವಿದ್ಯಾರ್ಥಿಗಳು ವಿರಾಜಪೇಟೆಯ ಅಂಚೆ ಕಚೇರಿಗೆ ಕ್ಷೇತ್ರ ಪ್ರವಾಸವನ್ನು ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಅಂಚೆ ಕಚೇರಿಯ ಸಿಬ್ಬಂದಿಗಳು ಮತ್ತು ಅಂಚೆ ಮಾಸ್ಟರ್ ವಿವಿಧ ರೀತಿಯ ಸ್ಟ್ಯಾಂಪ್ ಗಳನ್ನು ಪರಿಚಯಿಸಿದರು.
ಅಲ್ಲದೆ ಅಂಚೆ ಪೆಟ್ಟಿಗೆ, ಅಂಚೆಯ ವಿಲೇವಾರಿಯ ಬಗ್ಗೆ ಹಾಗೂ ಅಂಚೆ ಕಚೇರಿಯ ಕೆಲಸ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಇದೆಲ್ಲವನ್ನು ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಕೇಳಿ, ನೋಡಿ ಅರ್ಥೈಸಿಕೊಂಡರು.
ಸಹಶಿಕ್ಷಕರಾದ ನಿವ್ಯ ಪೊನ್ನಣ್ಣ, ಸುಪ್ರೀತಾ, ಶ್ರುತಿ, ಸುಕನ್ಯಾ, ಹರಿತ ಹಾಗೂ ದೈಹಿಕ ಶಿಕ್ಷಕಿ ಮೋನಿಕ ಹಾಜರಿದ್ದರು.









