ಸೋಮವಾರಪೇಟೆ ಫೆ.17 NEWS DESK : ಪಟ್ಟಣದ ಪ್ರಮುಖ ದೇವಾಲಯಗಳಲ್ಲೊಂದಾದ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ರಾಜಗೋಪುರ ನಿರ್ಮಿಸಲು ನೀಲಿ ನಕಾಶೆ ಸಿದ್ಧಪಡಿಸಲಾಗಿದ್ದು, ರೂ.42.50 ಲಕ್ಷ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಕಾಮಗಾರಿಗೆ ಮಾರ್ಚ್ 17ರಂದು ಆರಂಭವಾಗಲಿರುವ ಪ್ರಸಕ್ತ ಸಾಲಿನ ಜಾತ್ರಾಮಹೋತ್ಸವದಲ್ಲಿ ಶಾಸಕ ಮಂತರ್ ಗೌಡ ಚಾಲನೆ ನೀಡಲಿರುವರು ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ಕುಮಾರ್ ತಿಳಿಸಿದ್ದಾರೆ.
2023ರಲ್ಲಿ ಸಂಸದರು, ಶಾಸಕರು ಮತ್ತು ದಾನಿಗಳ ಸಹಕಾರದಿಂದ ಅನ್ನದಾನ ಮಂಟಪವನ್ನು ಲೋಕಾರ್ಪಣೆ ಮಾಡಲಾಗಿದೆ. ದೇವಾಲಯದ ಪುನರ್ ಪ್ರತಿಷ್ಠಾಪನೆಯ ಅಂಗವಾಗಿ ನಡೆಸಿದ ಬ್ರಹ್ಮ ಕಲಶೋತ್ಸವದ ನೆನಪಿಗಾಗಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗದಲ್ಲಿ ರಾಜಗೋಪುರ ನಿರ್ಮಿಸಲು 2024ರಲ್ಲಿ ಆಡಳಿತ ಮಂಡಳಿ ತೀರ್ಮಾನಿಸಿದೆ. 2022ರಲ್ಲಿ ಮುತ್ತಪ್ಪಸ್ವಾಮಿ ದೇವಾಲಯದ ಮುಂಭಾಗ ರೂ.11.50ಲಕ್ಷ ವೆಚ್ಚದಲ್ಲಿ ಮುಖಮಂಟಪವನ್ನು ನಿರ್ಮಿಸಲಾಗಿದೆ. ಅಲ್ಲದೇ ತ್ರಿಶಕ್ತಿಸ್ವರೂಪಿಣಿ ಭುವನೇಶ್ವರಿ ದೇವಾಲಯದ ಮುಂಭಾಗ ರೂ.11.50 ಲಕ್ಷ ವೆಚ್ಚದಲ್ಲಿ ಮುಖಮಂಟಪದ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ದೇವಾಲಯದಲ್ಲಿ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ ರಾಜಗೋಪುರ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ಗರ್ಭಗುಡಿಗೆ ಕಂಚಿನ ಹೊದಿಕೆ ಮತ್ತು ಹದಿನೆಂಟು ಮೆಟ್ಟಿಲಿಗೆ ಕೂಡ ಕಂಚಿನ ಹೊದಿಕೆ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ದೇವಾಲಯದ ವಿವಿಧ ಕಾಮಗಾರಿಗಳಿಗೆ ಅಗತ್ಯವಿರುವ ಆರ್ಥಿಕ ಸಹಕಾರಕ್ಕಾಗಿ ದಾನಿಗಳು ಮತ್ತು ಭಕ್ತಾದಿಗಳು ಸಹಕಾರ ನೀಡುವ ಮೂಲಕ ದೇವಾಲಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ.
ಮಾ.17, 18 ಮತ್ತು 19 ರಂದು ಜಾತ್ರೋತ್ಸವ
ಈ ಸಾಲಿನ ಜಾತ್ರೋತ್ಸವವು ಮಾ.17ರಂದು ಬೆಳಗ್ಗೆ 5.30ಕ್ಕೆ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ತಾಂತ್ರಿಕತ್ವದಲ್ಲಿ ಗಣಪತಿಹೋಮ ಪೂರೈಸುವುದರೊಂದಿಗೆ ಆರಂಭಿಸಲಾಗುವುದು. ಅಂದು ಸಂಜೆ 6.30ಕ್ಕೆ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಶ್ರೀಕೃಷ್ಣಕುಮಾರ್‍ಅವರು ವಿಶೇಷ ಆಶ್ಲೇಷ ಪೂಜೆ ನೆರವೇರಿಸುವರು. ಮಾರ್ಚ್18ರಂದು ಸೋಮವಾರ ಉತ್ಸವ ಕಾರ್ಯಕ್ರಮಗಳು ಆರಂಭವಾಗಲಿವೆ. ಅಂದು ಸಂಜೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು. ನಂತರ ವೆಳ್ಳಾಟಂ ಮತ್ತು ಮಾರ್ಚ್19ರಂದು ಮಂಗಳವಾರ ಬೆಳಗಿನ ಜಾವದಿಂದ ಕೋಲಗಳು ನಡೆಯಲಿರುವುದು ಎಂದು ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್‍ತಿಳಿಸಿದ್ದಾರೆ.
ರಾಜಗೋಪುರ ನಿರ್ಮಾಣ ಮತ್ತು ಜಾತ್ರೋತ್ಸವಕ್ಕೆ ಸಹಕಾರಕ್ಕೆ ಮನವಿ :: ದೇವಾಲಯದ ಜಾತ್ರೋತ್ಸವ ಮತ್ತು ರಾಜಗೋಪುರಕ್ಕೆ ಧನ ಸಹಾಯ ಮಾಡುವ ಭಕ್ತಾದಿಗಳು ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನ(ರಿ), ಬ್ಯಾಂಕ್‍ಖಾತೆ ಸಂಖ್ಯೆ 13825001001183401, ಐಎಫ್‍ಎಸ್‍ಸಿ ಕೋಡ್‍ಕೆಎಆರ್‍ಬಿ0000138 ಕ್ಕೆ ಆನ್‍ಲೈನ್‍ಮೂಲಕ ಹಣ ಸಂದಾಯ ಮಾಡಬಹುದು.
ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು, ಎನ್.ಡಿ.ವಿನೋದ್‍ಕುಮಾರ್‍ಮೊ: 9964996895, ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್ ಮೊ: 9448585509 ಸಂಪರ್ಕಿಸಲು ಕೋರಲಾಗಿದೆ.
ಅಭಿಪ್ರಾಯ :
ದೇವಾಲಯದಲ್ಲಿ ಕೋವಿಡ್ ನ ನಂತರ ಅನ್ನದಾನ ಮಂಟಪ, ಭುವನೇಶ್ವರಿ ದೇವಿಯ ಗರ್ಭಗುಡಿಗೆ ಮುಖಮಂಟಪ, ಶ್ರೀಮುತ್ತಪ್ಪಸ್ವಾಮಿ ದೇವಾಲಯದ ಗರ್ಭಗುಡಿ ಮುಂಭಾಗ ಮುಖಮಂಟಪ, ಬ್ರಹ್ಮಕಲಶೋತ್ಸವದ ಅಂಗವಾಗಿ ಈ ಸಾಲಿನಲ್ಲಿ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ ರಾಜಗೋಪುರ ನಿರ್ಮಾಣ ಮತ್ತು ಗರ್ಭಗುಡಿಗೆ ಕಂಚಿನ ಹೊದಿಕೆ ಹಾಗೂ ಹದಿನೆಂಟು ಮೆಟ್ಟಿಲಿಗೆ ಕಂಚಿನ ಹೊದಿಕೆ ನಿರ್ಮಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕ್ಷೇತ್ರದಲ್ಲಿ ಕೈಗೊಂಡ ಎಲ್ಲಾ ಕಾರ್ಯಗಳಿಗೆ ಭಕ್ತಾದಿಗಳು, ದಾನಿಗಳು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಸಹಕಾರವನ್ನು ಸ್ಮರಿಸುತ್ತೇನೆ. ಮುಂದಿನ ದಿನಗಳಲ್ಲಿ ದೇವಾಲಯದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎನ್.ಡಿ.ವಿನೋದ್‍ಕುಮಾರ್, ಅಧ್ಯಕ್ಷರು, ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯ, ಸೋಮವಾರಪೇಟೆ.
ವರದಿ: ಮುರಳೀಧರ್ ಶಾಂತಳ್ಳಿ