ಮಡಿಕೇರಿ ಫೆ.19 NEWS DESK : ವಾರ್ತಾ ಕಮ್ಯುನಿಕೇಶನ್ಸ್ ಪ್ರಸ್ತುತ ಪಡಿಸುವ ಪತ್ರಕರ್ತ ಅನಿಲ್ ಹೆಚ್.ಟಿ ಅವರು ಬರೆದಿರುವ “ಅಯೋಧ್ಯೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಫೆಬ್ರವರಿ 23ರಂದು ಸಂಜೆ 6 ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ಸತ್ಕಾರ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಗಜಾನನ ಶರ್ಮ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಕ್ತಿ ದಿನ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಪಾಲ್ಗೊಳ್ಳಲಿದ್ದಾರೆ. ಸರ್ವರೂ ಪಾಲ್ಗೊಳ್ಳುವಂತೆ ವಾರ್ತಾ ಕಮ್ಯುನಿಕೇಶನ್ ನ ಪ್ರಮುಖರಾದ ರೀನಾ ಅನಿಲ್ ಹೆಚ್. ಮನವಿ ಮಾಡಿದ್ದಾರೆ.











