ಕಡಂಗ ಫೆ.20 NEWS DESK : ಎಡಪಾಲ ಪ್ರೀಮಿಯರ್ ಲೀಗ್ ನ 10ನೇ ಆವೃತ್ತಿಯ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾವಳಿಯು ಎಡಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಿತು.
ಎರಡು ದಿನಗಳ ಕಾಲ 8 ಬಲಿಷ್ಠ ತಂಡಗಳ ನಡುವೆ ಪಂದ್ಯಾವಳಿ ನಡೆಯಿತು.
ಹತ್ತನೇ ಆವೃತ್ತಿಯ ಕ್ರಿಕೆಟ್ ಚಾಂಪಿಯನ್ ತಂಡವಾಗಿ ಫ್ಲೈಯಿಂಗ್ ಈಗಲ್ಸ್ ಬೆಂಗಳೂರು ತಂಡ ಪಡೆದುಕೊಂಡರೆ, ರನ್ನರ್ಸ್ ತಂಡವಾಗಿ ರೈಸಿಂಗ್ ಸ್ಟಾರ್ ಕತರ್ ತಂಡ ಪೆಡೆದುಕೊಂಡರು.
ಕ್ರೀಡಾಕೋಟದ ಬ್ಯಾಟ್ಸ್ಮೆನ್ ಆಗಿ ಈಗಲ್ಸ್ ತಂಡದ ಶಕೀರ್ ಮತ್ತು ಉತ್ತಮ ಬೌಲರ್ ಪ್ರಶಸ್ತಿ ಯನ್ನು ರೆಡ್ ಬುಲ್ ತಂಡದ ಹಂಜ್ಹ ಪೆಡೆದುಕೊಂಡರು.
ತೀರ್ಪುಗಾರಿಕೆಯನ್ನು ಮಡಿಕೇರಿಯ ಹನೀಫ ಹಾಗೂ ಅಭಿ ನಡೆಸಿಕೊಟ್ಟರು.
ವೀಕ್ಷಕ ವಿವರಣೆ ನವಾಜ್ಹ್ ಹಾಗೂ ಸುಹೇಲ್ ನಿರ್ವಹಿಸಿದರು.
ವಾಲಿಬಾಲ್ ಪಂದ್ಯಾವಳಿಯ ವಿಜೇತರಾಗಿ ಹನೀಫ ಮಾಲೀಕತ್ವದ ತೂಫಾನ್ ವಾರಿಯರ್ಸ್ ಹಾಗೂ ರನ್ನರ್ಸ್ ತಂಡವಾಗಿ ನವಾಜ್ಹ್ ಮಾಲೀಕತ್ವದ ಬ್ಲಾಕ್ ಬಸ್ಟರ್ ತಂಡ ಪ್ರಶಸ್ತಿ ಪಡೆದುಕೊಂಡರು.
ವಾಲಿಬಾಲ್ ಪಂದ್ಯಾಟದ ಉತ್ತಮ ಆಟಗಾರ ಪ್ರಶಸ್ತಿಯನ್ನು ಯಹ್ಯಾ, ಅಟ್ಯಾಕ್ಕರ್ ರಫೀಕ್, ಸೆಟರ್ ಸಾಹಿದ್ ಪೆಡೆದುಕೊಂಡರು.
ಅತ್ಯುತ್ತಮವಾಗಿ ಕ್ರಿಕೆಟ್ ಕ್ರೀಡಾಕೂಟ ನಡೆಸಿ ಕೊಟ್ಟಂತಹ ಉಸ್ಮಾನ್ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಅಧ್ಯಾಪಕ ಉಮ್ಮರ್ ಮಾಸ್ಟರ್ , ಪಂಚಾಯತ್ ಸದಸ್ಯರಾದ ಮೊಹಮ್ಮದ್, ರಶೀದ್ ಕುಪ್ಪಂಡ, ಸಿ ಆರ್ ಪಿ ಎಫ್ ಉಮರ್, ಎಡಪಾಲ ಕ್ರಿಕೆಟ್ ಪ್ರೀಮಿಯರ್ ಲೀಗ್ ಸ್ಥಾಪಕ ಹನೀಫ ಉಪಸ್ಥಿತರಿದ್ದರು.
ವರದಿ : ನೌಫಲ್ ಕಡಂಗ