ಮಡಿಕೇರಿ ಫೆ.26 NEWS DESK : ರಾಮಯಣ ಕಾಲಘಟ್ಟದಲ್ಲಿಯೇ ಆಭರಣಗಳಿಗೆ ಬಹಳ ಮಹತ್ವ ಇತ್ತು. ಇತಿಹಾಸದ ಧಾಮಿ೯ಕ ಘಟನಾವಳಿಗಳನ್ನು ಆಭರಣಗಳಲ್ಲಿ ಮೂಡಿಸುವ ಮೂಲಕ ಜನರ ಭಕ್ತಿಭಾವನೆಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತದೆ ಎಂದು ಪತ್ರಕತ೯, ಅಯೋಧ್ಯೆ ಪುಸ್ತಕದ ಲೇಖಕ ಅನಿಲ್ ಹೆಚ್.ಟಿ. ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯಲ್ಲಿ ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ಕೃಷ್ಣವೇಣಿ ಮುಳಿಯ ವಿನ್ಯಾಸದಲ್ಲಿ ತಯಾರಾದ ಅಯೋಧ್ಯೆ ಶ್ರೀರಾಮಲಲ್ಲನ ಪರಿವಾರ ಚಿತ್ರವಿರುವ ಕಂಠಹಾರವನ್ನು (ಚೋಕರ್ ) ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿಮಾ೯ಣ ಆಗಬೇಕೆಂಬ ಭಾವನೆ ಪ್ರತೀಯೋವ೯ ಭಾರತೀಯನ ಅನೇಕ ದಶಕಗಳ ಕನಸಾಗಿತ್ತು. ಎಲ್ಲರ ನಿರೀಕ್ಷೆಗೂ ಮೀರಿ ಬಾಲರಾಮನ ಮೂತಿ೯ಯು ಕನ್ನಡದ ಕಲ್ಲಿನಲ್ಲಿಯೇ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಅಪೂವ೯ವಾಗಿ ರೂಪು ತಳೆದಿದೆ. ಎಲ್ಲರಿಗೂ ಅವರದ್ದೇ ಆದ ದೇವರು, ದೇವಮಂದಿರಗಳಿದ್ದರೂ ಎಲ್ಲರಿಗೂ ಸೇರಿದ ದೈವಮಂದಿರವಾಗಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಕಂಗೊಳಿಸಿದೆ. ಈ ರಾಮಮಂದಿರ ಎಲ್ಲರ ಪಾಲಿಗೂ ಮನಸ್ಸಿನ ಮಂದಿರವಾಗಬೇಕು. ಪ್ರೀತಿಯ ಮಂದಿರವಾಗಬೇಕು. ಹಾಗೇ ಭಾರತದ ರಾಷ್ಟ್ರೀಯ ಮಂದಿರವಾಗಿ ಗಮನ ಸೆಳೆಯಬೇಕೆಂದು ಹಾರೈಸಿದರು.
ರಾಮಾಯಣ ಕಾಲದಲ್ಲಿಯೂ ಆಭರಣ ಮಹತ್ವದ ಪಾತ್ರ ವಹಿಸಿತ್ತು ಎಂದು ಸ್ಮರಿಸಿಕೊಂಡ ಅನಿಲ್, ಲಂಕೆಯ ಅಶೋಕ ವನದಲ್ಲಿ ಶ್ರೀರಾಮನ ನಿರೀಕ್ಷೆಯಲ್ಲಿದ್ದ ಸೀತಾಮಾತೆಯನ್ನು ಭೇಟಿಯಾದ ಹನುಮಂತನು ತಾನು ರಾಮನ ಬಂಟ ಎಂದು ಸಾಬೀತು ಪಡಿಸಲು ಸೀತೆಗೆ ರಾಮನ ವಿವಾಹದ ಉಂಗುರ ತೋರಿಸಿದ. ಹಾಗೇ ಸೀತೆಯನ್ನು ಭೇಟಿಯಾದ ಕುರುಹಿಗಾಗಿ ಹನುಮಂತನು ಆಕೆ ನೀಡಿದ್ದ ಚೂಡಾಮಣಿಯನ್ನು ಶ್ರೀರಾಮನ ಬಳಿಗೆ ತೆಗೆದುಕೊಂಡು ಹೋದ ಘಟನೆ ರಾಮಯಣದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
ಆಭರಣಗಳ ತಯಾರಿಕೆಯಲ್ಲಿ ಮುಳಿಯ ಜ್ಯುವೆಲ್ಲರ್ಸ್ ಗೆ ತನ್ನದೇ ಆದ 8 ದಶಕಗಳ ವೈಭವದ ಇತಿಹಾಸವಿದೆ. ಸದಾ ವಿನೂತನ ಪ್ರಯೋಗಗಳನ್ನು ಸ್ವಣಾ೯ಭರಣಗಳ ತಯಾರಿಕೆಯಲ್ಲಿ ಮುಳಿಯ ಸಂಸ್ಥೆಯವರು ಯಶಸ್ವಿಯಾಗಿ ಮಾಡುತ್ತಾ ಬಂದಿದ್ದಾರೆ. ವ್ಯವಹಾರಿಕತೆ ಜತೇ ಧಾಮಿ೯ಕ ಮನೋಭಾವನೆಯನ್ನು ಜನರಲ್ಲಿ ಮೂಡಿಸುವ ಪ್ರಯತ್ನ ಮುಳಿಯ ಸಂಸ್ಥೆಯವರಿಂದ ಆಗುತ್ತಲೇ ಇದೆ. ಇದು ಮಾದರಿಯಾದದ್ದು ಎಂದೂ ಅನಿಲ್ ಶ್ಲಾಘಿಸಿದರು.
ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮಲಲ್ಲನಿಗೆ ತೊಡಿಸಿರುವ ಕಂಠಹಾರದಂತೆಯೇ ಭಕ್ತರು ಕೊರಳಲ್ಲಿ ಧರಿಸಿ ಕಂಗೊಳಿಸುವಂತೆ ಈ ಕಂಠಹಾರ ತಯಾರಿಸಲಾಗಿದೆ . ಆಭರಣ ರೂಪದಲ್ಲಿ ರಾಮಲಲ್ಲನನ್ನು ನೆನಪಿಸಿಕೊಳ್ಳುವ ಪ್ರಯತ್ನ ಇದಾಗಿದೆ. ಎಂದರಲ್ಲದೇ, ಶ್ರೀರಾಮಮಂದಿರ ಭವ್ಯವಾಗಿ ರೂಪುಗೊಂಡದ್ದನ್ನು ನೋಡುವ ಭಾಗ್ಯ ಈ ತಲೆಮಾರಿನದ್ದಾಗಿದೆ ಎಂದೂ ಅವರು ಹೆಮ್ಮೆ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಯ ಮಕ್ಕಳನ್ನು ನಾವು ಸೂಕ್ತ ಧಾಮಿ೯ಕ ಶಿಕ್ಷಣ ನೀಡುವ ಮೂಲಕ, ಭಾರತದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡುವ ಮೂಲಕವೂ ಉತ್ತಮ ಪ್ರಜೆಗಳಾಗಿ ಮಾಡುವಂತಾಗಬೇಕೆಂದು ಅಭಿಪ್ರಾಯಪಟ್ಟರು. ದಿನಕ್ಕೆ ಕನಿಷ್ಟ 10 ಪುಟಗಳನ್ನಾದರೂ ಧಾಮಿ೯ಕ ಸಂಬಂಧಿತ ಪುಸ್ತಕಗಳಲ್ಲಿ ಓದಿದರೆ ಪ್ರತಿಯೋವ೯ರ ಧಾಮಿ೯ಕ ಜ್ಞಾನ ಹೆಚ್ಚಳವಾಗುತ್ತದೆ ಎಂದೂ ಕೇಶವಪ್ರಸಾದ್ ಸಲಹೆ ನೀಡಿದರು.
ಮುಳಿಯ ಜ್ಯುವೆಲ್ಲರ್ಸ್ ನ ವ್ಯವಸ್ಥಾಪಕ ನಿದೇ೯ಶಕ ಕೖಷ್ಣ ನಾರಾಯಣ ಮುಳಿಯ ಮಾತನಾಡಿ, ಶ್ರೀರಾಮನ ನಡೆ ಮತ್ತು ಶ್ರೀಕೖಷ್ಣನ ನುಡಿ ಚಂದ ಎಂಬ ಮಾತಿನಂತೆ ಶ್ರೀರಾಮನ ಜೀವನ ಆದಶ೯ ಮತ್ತು ಭಗವದ್ಗೀತೆಯ ಕೃಷ್ಣೋಪದೇಶದ ನುಡಿಗಳನ್ನು ನಮ್ಮ ಜೀವನಕ್ಕೆ ಆದಶ೯ಪ್ರಾಯವಾಗಬೇಕೆಂದು ಕರೆ ನೀಡಿದರು. ಆಧುನಿಕ ಕಾಲಘಟ್ಟದಲ್ಲಿ ಪ್ರತೀಯೋವ೯ರಿಗೂ ಧಾಮಿ೯ಕ ಶಿಕ್ಷಣ ಮಹತ್ವದ್ದಾಗಬೇಕೆಂದು ಅವರು ಹೇಳಿದರು.
ಅನೇಕ ಮಕ್ಕಳು ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತನ ಪಾತ್ರ ಧರಿಸಿ ಕಾಯ೯ಕ್ರಮಕ್ಕೆ ಬಂದಿದ್ದರು. ಮುಳಿಯ ಸಂಸ್ಥೆಯ ಮಾರುಕಟ್ಟೆ ಪ್ರಮುಖ ಸಂಜೀವ್, ಮಡಿಕೇರಿ ಶಾಖೆಯ ಮುಖ್ಯಸ್ಥ ತೀತಿಮಾಡ ಸೋಮಣ್ಣ ಹಾಜರಿದ್ದರು.