ಮಡಿಕೇರಿ ಫೆ.26 NEWS DESK : ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪ ಕೊಪ್ಪದಲ್ಲಿ ನಡೆದಿದೆ.
ಸೂರ್ಲಬ್ಬಿ ಗ್ರಾಮದ ಅಡ್ಡಂಡ ಪೊನ್ನಪ್ಪ ಹಾಗೂ ಪವಿತ್ರ ದಂಪತಿಯ ಪುತ್ರ ದೇವಯ್ಯ (9) ಮೃತ ದುರ್ದೈವಿ. ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿದ್ದು, ತಕ್ಷಣ ಆಸ್ಪತ್ರೆಗೆ ಕರೆ ತರಲಾಯಿತ್ತಾದರೂ ಜೀವ ಉಳಿಯಲಿಲ್ಲ ಎಂದು ತಿಳಿದು ಬಂದಿದೆ.
ದೇವಯ್ಯ ಕುಶಾಲನಗರದ ಖಾಸಗಿ ಶಾಲೆಯ 3ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.