ನಾಪೋಕ್ಲು ಫೆ.27 NEWS DESK : ಹೊದ್ದೂರು ಗ್ರಾಮ ಪಂಚಾಯತಿ ಕಚೇರಿ ಹಾಗೂ ಗ್ರಂಥಾಲಯಕ್ಕೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ, ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರುದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಉಪಾಧ್ಯಕ್ಷರಾದ ಅನುರಾಧ, ಸದಸ್ಯರಾದ ಮೊಣ್ಣಪ್ಪ, ಹಮೀದ್, ಕುಸುಮಾವತಿ, ಕೆ.ಆರ್ ಅನಿತಾ, ವಾಂಚಿರ ಅಜಯ್ ಕುಮಾರ್, ಚೌರೀರ ಅನಿತಾ , ಲಕ್ಷ್ಮಿ, ಮೊಯ್ದು, ಪಿಡಿಒ ಅಬ್ದುಲ್ಲ, ತೆನ್ನಿರ ಮೈನಾ , ಕತ್ತನಿರ ಮೈಸಿ, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ