ಮಡಿಕೇರಿ ಫೆ.28 NEWS DESK : ಮಡಿಕೇರಿಯ ಅಮೃತ ಇ.ಎನ್.ಟಿ ಮತ್ತು ವರ್ಟಿಗೋ ಕ್ಲಿನಿಕ್, ಕಾವೇರಿ ಹಿಯರಿಂಗ್ ಕ್ಲಿನಿಕ್, ಜಿ.ಎನ್.ರಿಸೌಂಡ್ ಹಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಸಂಯುಕ್ತಾಶ್ರಯದಲ್ಲಿ ಮಾ.3 ರಂದು ಉಚಿತ ಇಎನ್‍ಟಿ ಮತ್ತು ಶ್ರವಣ ತಪಾಸಣಾ ಶಿಬಿರ ನಡೆಯಲಿದೆ ಎಂದು ಶ್ರವಣ ತಜ್ಞ ಡಾ. ಮೋಹನ್ ಅಪ್ಪಾಜಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ನಗರದ ಕಾಫಿ ಕೃಪಾ ಬಿಲ್ಡಿಂಗ್ ನಲ್ಲಿರುವ ಅಮೃತ ಇಎನ್‍ಟಿ, ವರ್ಟಿಗೋ ಕ್ಲಿನಿಕ್ ಹಾಗೂ ಕಾವೇರಿ ಹಿಯರಿಂಗ್ ಕ್ಲಿನಿಕ್ ನಲ್ಲಿ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ಉಚಿತ ಇ.ಎನ್.ಟಿ, ಶ್ರವಣ ತಪಾಸಣೆಯೊಂದಿಗೆ 40 ವರ್ಷ ಮೇಲ್ಪಟ್ಟವರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣೆ ನಡೆಯಲಿದ್ದು, ತಜ್ಞ ವೈದ್ಯರಿಂದ ಮಧುಮೇಹ, ಆಹಾರ ಸಮಾಲೋಚನೆ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಕೂಡ ಮಾಡಲಾಗುವುದೆಂದರು. ಅಲ್ಲದೆ ಹಳೆಯ ಶ್ರವಣ ಸಾಧನಗಳನ್ನು ಬದಲಾಯಿಸಲು ಅವಕಾಶ ಇರುವುದಾಗಿ ತಿಳಿಸಿದರು.
ಆಸಕ್ತರು ಮಾ.2ರ ಒಳಗಾಗಿ ಹೆಚ್ಚಿನ ವಿವರಗಳು ಮತ್ತು ನೇಮಕಾತಿಗಾಗಿ 8792874030, 08272-221460 ಸಂಪರ್ಕಿಸುವಂತೆ ತಿಳಿಸಿದ ಅವರು, ಶಿಬಿರಕ್ಕೆ ಹಾಜರಾಗುವವರು ಹಳೆಯ ವೈದ್ಯಕೀಯ ವರದಿಗಳು ಇದ್ದಲ್ಲಿ ಕಡ್ಡಾಯವಾಗಿ ತರುವಂತೆ ಮನವಿ ಮಾಡಿದರು.
ಶ್ರಮಣ ದೋಷವುಳ್ಳವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಗುತ್ತಲೇ ಇದೆ.ಪ್ರಸ್ತುತ ಭಾರತದಲ್ಲಿ 63 ಮಿಲಿಯ ಮಂದಿ ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಅಷ್ಟೊಂದು ಮಂದಿಗೆ ಚಿಕಿತ್ಸೆ ನೀಡುವುದು ತ್ರಾಸದಾಯಕ ಎಂದು ತಿಳಿಸಿದರು.
ಆಡಿಯೋಲಾಜಿಸ್ಟ್ ಅಚ್ಚಯ್ಯ ಮಾತನಾಡಿ, ಶ್ರವಣ ಸಮಸ್ಯೆ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಪರೀಕ್ಷಿಸಿಕೊಳ್ಳಬೇಕು. ಸಣ್ಣ ಮಕ್ಕಳಿದ್ದಾಗಲೇ ಸರಿಪಡಿಸಿಕೊಳ್ಳಬೇಕು. ದೊಡ್ಡವರಾದ ಮೇಲೆ ತೊಂದರೆ ಆಗಬಹುದು. ನಿರ್ಲಕ್ಷ್ಯ ಮಾಡಿದರೆ ನಂತರ ಸಲಕರಣೆ ಹಾಕಿದರೂ ಪ್ರಯೋಜನವಾಗುದಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಿಬಿರ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು.