ಮಡಿಕೇರಿ ಫೆ.29 NEWS DESK: ಕರ್ನಾಟಕ ಲೋಕಸೇವಾ ಆಯೋಗವು 384 ಗ್ರೂಪ್-ಎ ಹಾಗೂ ಗ್ರೂಪ್-ಬಿ ಗೆಜೆಟೆಡ್ ಪ್ರೊಬೇಶನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು https://www.kpsc.kar.nic.in/ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಮಾ.4 ರಿಂದ ಏ.3 ರೊಳಗೆ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಮಾರ್ಚ್, 07 ರಂದು ಬೆಳಗ್ಗೆ 10 ಗಂಟೆಗೆ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್ ನಲ್ಲಿ ಕೆಎಎಸ್, ಪಿಡಿಒ, ಬ್ಯಾಂಕ್, ಎಫ್‍ಡಿಎ, ಎಸ್‍ಡಿಎ, ಪಿಎಸ್‍ಐ, ಪೀಸಿ, ಗ್ರಾಮ ಅಡಳಿತ ಅಧಿಕಾರಿ ಹಾಗೂ ಇತರೆ ನೇಮಕಾತಿ ಪರೀಕ್ಷೆಗಳ ಬಗ್ಗೆ ನುರಿತ ವಿಷಯ ತಜ್ಞರಿಂದ ಉಚಿತ ಜಾಗೃತಿ ಕಾರ್ಯಾಗಾರ ನಡೆಯಲಿದೆ.
ಆಸಕ್ತರು http://tinyurl.com/FREE-AWARENESS-WORKSHOP ಲಿಂಕ್ ಕ್ಲಿಕ್ ಮಾಡಿ ಅಥವಾ 8660217739 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮಾಡಿ ಈ ಉಚಿತ ಕಾರ್ಯಾಗಾರಕ್ಕೆ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್‍ನ ಕಾರ್ಯದರ್ಶಿ ಹೆಮ್ಮಿಗೆ ಮೋಹನ್ ತಿಳಿಸಿದ್ದಾರೆ.









