ಮಡಿಕೇರಿ ಫೆ.29 NEWS DESK : ಮದೆನಾಡು ಬಿಜಿಎಸ್ ವಿದ್ಯಾಸಂಸ್ಥೆಯ 2ನೇ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು.
ಮೈಸೂರು ಹಾಗೂ ಕೊಡಗು ಆದಿಚುಂಚನಗಿರಿ ಮಠದ ಮುಖ್ಯಸ್ಥರಾದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿಯೊಂದು ಮಗುವಿನ ಜ್ಞಾನಾರ್ಜನೆಗೆ ಶಾಲೆಗಳು ಅವಶ್ಯವಾಗಿದ್ದು, ಶಾಲೆಯನ್ನು ಉಳಿಸಿ ಬೆಳಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿಯಾಗಿ ವಿನಾಯಕ್ ನರ್ವಾಡೆ ಮಾತನಾಡಿ ಪೋಷಕರು ಮಕ್ಕಳಲ್ಲಿ ಉತ್ತಮ ಹವ್ಯಾಸವನ್ನು ಕಲಿಸುವ ಮೂಲಕ ಮಾನಸಿಕ ಸದೃಢತೆಯನ್ನು ಬೆಳೆಸಬೇಕು ಎಂದರು.
ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ ಹೆಚ್.ಎನ್.ಸುಧಾಕರ್, ಸಿದ್ದಾಪುರ ಬಿಜಿಎಸ್ ವಿದ್ಯಾ ಸಂಸ್ಥೆಯ ಮೇಲ್ವಿಚಾರಕ ಮಂಜುನಾಥ್,
ಮಲೆನಾಡು ಬಿಜಿಎಸ್ ವಿದ್ಯಾ ಸಂಸ್ಥೆಯ ಮೇಲ್ವಿಚಾರಕ ಹೆಚ್.ಜೆ.ಸಚಿನ್ ಗೌಡ, ಮೇಜರ್ ಡಾ ಕುಶ್ವಂತ್ ಕೋಳಿಬೈಲು , ಕೊಡಗು ಗೌಡ ವಿದ್ಯಾ ಸಂಘ ಅಧ್ಯಕ್ಷ ಅಂಬೇಕಲ್ ನವೀನ್, ವಿದ್ಯಾ ಸಂಸ್ಥೆ ಅಧ್ಯಕ್ಷ ಹುದೇರಿ ರಾಜೇಂದ್ರ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಮದೆ ಗ್ರಾ.ಪಂ ಅಧ್ಯಕ್ಷೆ ವಿಮಲಾಕ್ಷಿ, ಪ್ರಮುಖರಾದ ಮುದ್ದೆಯನ ಕಿಶನ್ ಪಾಲ್ಗೊಂಡಿದ್ದರು.
ಶಿಕ್ಷಕಿ ಪಿ.ಜಿ.ಸವಿತ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಎಂ.ಬಿ.ಪುನೀತ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆ ಯನ್ನು ಶಿಕ್ಷಕರುಗಳಾದ ಶೃತಿ, ಕೆ.ಆರ್.ಜೀವಿತ ನಿರ್ವಹಿಸಿದರು. ಶಿಕ್ಷಕಿ ಸ್ವಪ್ನ ವಂದಿಸಿದರು. ಕೊನೆಯಲ್ಲಿ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಕಣ್ಮನ ಸೆಳೆಯಿತು.