ನಾಪೋಕ್ಲು ಮಾ.1 NEWS DESK : ಭಾರತ ಸರ್ಕಾರದ ಕಾಫಿ ಮಂಡಳಿ ಮತ್ತು ಬೆಟ್ಟಗೇರಿಯ ವ್ಯವಸಾಯ ಸಹಕಾರಿ ಬ್ಯಾಂಕಿನ ಜಂಟಿ ಆಶ್ರಯದಲ್ಲಿ ಸಂಚಾರಿ ಮಣ್ಣು ಪರೀಕ್ಷಾ ಅಭಿಯಾನ ನಡೆಯಿತು.
ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕಾಫಿ ಮಂಡಳಿಯ ನಿರ್ದೇಶಕ ತಳೂರು ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೆವಿಕೆ ವಿಜ್ಞಾನಿಗಳು ಕಾಫಿ ತೋಟ, ಕಾಳುಮೆಣಸಿನ ಕೃಷಿಗಳಿಗೆ ಹಾಕುವ ರಸಗೊಬ್ಬರ, ಕೀಟನಾಶಕಗಳ ಬಗ್ಗೆ ರೈತರಿಗೆ ಸಮಗ್ರ ಮಾಹಿತಿಯನ್ನು ನೀಡಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್, ಬೆಟ್ಟಗೇರಿ ವಿಎಸ್ಎಸ್ಎನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಶೀಲಾ ರೈ, ನಿವೃತ ಶಿಕ್ಷಕ ಕೆದಂಬಾಡಿ ಪುಟ್ಟಯ್ಯ, ಹಾಗೂ ಕಾಫಿ ಬೆಳೆಗಾರರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.