ವಿರಾಜಪೇಟೆ ಮಾ.2 NEWS DESK : ವನದೇವರುಗಳ ಆರಾಧನೆ ಮತ್ತು ಕುಲ ಕುಟುಂಬಗಳ ಆರಾಧನಾ ಪದ್ಧತಿಗಳು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ನಿಟ್ಟಿನಲ್ಲಿ ಮೂರೀರ ಕುಟುಂಬದ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾ.ಪಂ ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲಿ ನೆಲೆಸಿರುವ ಮೂರೀರ ಕುಟುಂಬದ ಅಧೀನದಲ್ಲಿರುವ ಮಂದ್ರಮೂರ್ತಿ, ವಿಷ್ಣು ಮೂರ್ತಿ ಮತ್ತು ಕಾಳೇಘಾಟು ದೇವಿಯ ದೇಗುಲದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.
ದೇಗುಲ ಆವರಣದಲ್ಲಿ ನಡೆಯುವ ಉತ್ಸವವನ್ನು ಕೇರಳ ರಾಜ್ಯದ ಕಾಳೇಘಾಟ್ ಸ್ಥಳದ ಪ್ರಸಿದ್ಧ ತಂತ್ರಿಗಳಾದ ಸಂದೀಪ್ ತಂತ್ರಿಗಳಿಂದ ಗಣಪತಿ ಹೋಮ ಮತ್ತು ದೈವಿಕ ವಿಧಾನಗಳನ್ನು ನಡೆಸಲಾಯಿತು. ಬಳಿಕ ದೇವಿ ಮತ್ತು ಶಾಸ್ತವು, ಮಂದ್ ಅಜ್ಜಪ್ಪ ದೇವರಿಗೆ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ ಸಲ್ಲಿಸಲಾಯಿತು.
ಪ್ರಥಮ ದಿನದಂದು ಕಾರಣ ತೆರೆ, ಮಾ.ತೆರೆ, ನುಚ್ಚುಟ್ಟೆ ತೆರೆಗಳು ಮುಂಜಾನೆ ಯ ವರೆಗೂ ನಡೆದು ಮರು ದಿನ ಚೌಂಡಿ ತೆರೆ,ಕುಳಿಯ ತೆರೆ, ತೌಡು ತೆರೆ, ಶಾಸ್ತಾವು ತೆರೆ ಮತ್ತು ಕೊನೆಯಲ್ಲಿ ಅಜ್ಜಪ್ಪ ತೆರೆಗಳು ಸಾಂಪ್ರದಾಯಿಕವಾಗಿ ಗೋವು ಪೊಜೆ ಮಾಡುವುದು ಸಹಜ ಕ್ರಿಯೆಯಾದುದರಿಂದ ಎತ್ತು ಪೋರಾಟ್ ನಡೆಸಲಾಯಿತು. ಬಳಿಕ ಆಗಮಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.
ಮೂರಿರ ಕುಟುಂಬ ಪಟ್ಟೇದಾರರಾದ ಕುಶಾಲಪ್ಪ,ದೈವ ನರ್ತಕರಾದ ಮಿಟ್ಟು ಚಿಟ್ಟಿಯಪ್ಪ ಮತ್ತು ಕುಟುಂಬಸ್ಥರು, ನೆರೆಯ ಗ್ರಾಮದ ಗ್ರಾಮಸ್ಥರು, ನೂರಾರು ಸಂಖ್ಯೆ ಯಲ್ಲಿ ಭಕ್ತರು ಹಾಜರಿದ್ದರು.
ದೇಗುಲ ಹಿನ್ನೆಲೆ:
1837 ರ ಸಮಯದಲ್ಲಿ ಮೂರಿರ ಕುಟುಂಬದಲ್ಲಿ ಪ್ರಥಮ ಆದ್ಯ ದೈವ ಅಜ್ಜಪ್ಪ ನೆಲೆಗೊಂಡು ಎಡ ಬಲದಲ್ಲಿ ಮಂದ್ರಮೂರ್ತಿ, ವಿಷ್ಣು ಮೂರ್ತಿ ದೈವಗಳು ನೆಲೆಬರುತ್ತದೆ ತದ ನಂತರದಲ್ಲಿ ದೇವಿಗೆ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಕಾಳೇಘಾಟ್ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹೀಗೆ ನೆಲೆಗೊಂಡ ಕ್ಷೇತ್ರದಲ್ಲಿ ಕುಂಬ್ಯಯರ್ 17, 18 ನೇ ದಿನದಂದು ಎರಡು ದಿನಗಳ ಕಾಲ ತೆರೆ ಮತ್ತು ದೈವಗಳ ಸೇವೆ ನಡೆಯುತ್ತದೆ. ಉತ್ಸವಕ್ಕೆ ನವ ದಿನಗಳ ಹಿಂದೆ ಕಟ್ಟು ಬಿಳುತ್ತದೆ. ಊರು ಕಟ್ಟ್ ಪ್ರತಿಯೊಂದು ವ್ಯಕ್ತಿಯು ಪಾಲನೆ ಮಾಡಬೇಕು. ಕಟ್ಟು ಕಳೆದ ಮರು ದಿನವೇ ಉತ್ಸವ ಆರಂಭವಾಗುತ್ತದೆ ಎಂದು ಊರಿನ ಹಿರಿಯರಾದ ಮೂರಿರ ಸಿ. ಸೋಮಯ್ಯ ಹೇಳುತ್ತಾರೆ.