ಮಡಿಕೇರಿ ಮಾ.3 NEWS DESK : ಶನಿವಾರ ಕೆಲಸಕ್ಕೆಂದು ತೆರಳಿದ ವ್ಯಕ್ತಿಯೊಬ್ಬರು ಮನೆಗೆ ಮರಳದೆ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಮಡಿಕೇರಿ ಹೊರ ವಲಯದ ಗಾಳಿಬೀಡು ಗ್ರಾಮದ ನಿಶಾನಿ ಬೆಟ್ಟದಲ್ಲಿ ನಡೆದಿದೆ.
ಗಾಳಿಬೀಡು ಗ್ರಾಮದ ನಿವಾಸಿ ಅಪ್ಪಚ್ಚ(60) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಪ್ರವಾಸಿಗರು ಟ್ರಕ್ಕಿಂಗ್ ಗಾಗಿ ನಿಶಾನಿ ಬೆಟ್ಟಕ್ಕೆ ಹೋಗುತ್ತಿದ್ದ ಸಂದರ್ಭ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಾಡಾನೆ ದಾಳಿಯಿಂದ ಅಪ್ಪಚ್ಚ ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಶವ ದೊರೆತ ಪ್ರದೇಶದಲ್ಲಿ ಆನೆ ಸಂಚರಿಸಿರುವ ಕುರುಹು ಪತ್ತೆಯಾಗಿದೆ.
ಅಪ್ಪಚ್ಚ ಅವರು ಶನಿವಾರ ಬೆಳಗ್ಗೆ ಕೆಲಸಕ್ಕೆಂದು ಹೋಗಿದ್ದವರು ಮನೆಗೆ ಮರಳಿರಲಿಲ್ಲ. ಮನೆಯವರು ರಾತ್ರಿಯವರೆಗೂ ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ ಇಂದು ಮುಂಜಾನೆ ಅಪ್ಪಚ್ಚ ಅವರ ಮೃತದೇಹ ಪ್ರವಾಸಿಗರಿಗೆ ಗೋಚರಿಸಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.