ಮಡಿಕೇರಿ ಮಾ.4 NEWS DESK : ಚೆಟ್ಟಳ್ಳಿ ಸಮೀಪದ ಕಂಡಕರೆ ಮುಸ್ಲಿಮ್ ಜಮಾಹತ್ ಕಮಿಟಿಯ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ.ಹೆಚ್.ಅಬ್ದುಲ್ ಗಫೂರ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ.ಮೊಹಮ್ಮದ್ ರಫಿ ಹಾಗೂ ಕೋಶಾಧಿಕಾರಿಯಾಗಿ ಕೆ.ಬಿ.ರಜಾಕ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಕಂಡಕರೆ ಹಯಾತುಲ್ ಇಸ್ಲಾಮ್ ಮದರಸದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಹಳೆಯ ಸಮಿತಿಯನ್ನು ಮುಂದುವರಿಸಿ ಪುನರಾಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಲಿ ಹಾಜಿ, ಸಹ ಕಾರ್ಯದರ್ಶಿಯಾಗಿ ಪಿ.ಎಂ.ಅಲಿ, ಸ್ವಲಾತ್ ಕಮಿಟಿ ಸದಸ್ಯರಾಗಿ ಕೆ.ಎ.ಹುಸೈನ್, ಕಾರ್ಯದರ್ಶಿಯಾಗಿ ಟಿ.ಎಂ. ನಿಜಾಮ್ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಕೆ.ಎಂ.ಯೂಸುಫ್, ಎ.ಹಂಸ, ಮನ್ಸೂರ್, ಹಾರಿಸ್, ಇಸ್ಮಾಯಿಲ್, ಮಹಮ್ಮದ್, ಸುಹೈಲ್, ಸರ್ಫುದ್ದೀನ್, ಫಾರೂಖ್, ಜಂಶೀದ್ ಹಾಗೂ ಕೆ.ಯು.ಹುಸೈನ್ ಆಯ್ಕೆಯಾಗಿದ್ದಾರೆ.