ಮಡಿಕೇರಿ ಮಾ.4 NEWS DESK : ಮಾಯಮುಡಿಯ ಕಮಟೆ ಮಹಾದೇವರ ದೇವಾಲಯದಲ್ಲಿ ಮಾ.8 ರಂದು ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ.
ಅಂದು ರಾತ್ರಿ 7 ಗಂಟೆಗೆ ದೇವಾಲಯದಲ್ಲಿ ಮಹಾದೇವರಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದ್ದು, ಜಾಗರಣೆ ಪ್ರಯುಕ್ತ ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸಣ್ಣುವಂಡ ಬಿ.ರಮೇಶ್ ಹಾಗೂ ಕಾರ್ಯದರ್ಶಿ ಸಣ್ಣುವಂಡ ವಿನಯ್ ಅಯ್ಯಪ್ಪ ಮನವಿ ಮಾಡಿದ್ದಾರೆ.







