ಮಡಿಕೇರಿ ಮಾ.5 NEWS DESK : ಕಡಗದಾಳು ಗ್ರಾಮದಲ್ಲಿರುವ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಮಾ.8 ಮತ್ತು 9 ರಂದು ಮಹಾಶಿವರಾತ್ರಿಯ ವಾರ್ಷಿಕ ಪೂಜೆ ನಡೆಯಲಿದೆ.
ಮಾ.8 ರಂದು ಬಿಲ್ವಪತ್ರೆ ಅರ್ಚನೆ, ಎಳೆನೀರು ಅಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ. ರಾತ್ರಿ ಜಾಗರಣೆ ನಡೆಯಲಿದೆ.
ಮಾ.9 ರಂದು ಬೆಳಿಗ್ಗೆ 10 ಗಂಟೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡು ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನದಾನ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಬೊಟ್ಲಪ್ಪ ಯುವ ಸಂಘದ ಪ್ರಮುಖರು ಮನವಿ ಮಾಡಿದ್ದಾರೆ.





































