ನಾಪೋಕ್ಲು ಮಾ.5 NEWS DESK : ಕೋಕೇರಿ ಗ್ರಾಮದ ಅಂಬಾಡಿ ಪೈಸರಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕೂಲಿ ಕಾರ್ಮಿಕನ ಮನೆಯೊಂದು ಧರೆಗುರುಳಿದೆ.
ಚೈಯoಡಣೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೋಕೇರಿ ಗ್ರಾಮದ ಅಂಬಾಡಿ ಪೈಸಾರಿಯಲ್ಲಿ ಸುಮಾರು ಎಂಟು ವರ್ಷಗಳಿಂದ ವಾಸವಾಗಿದ್ದ ಕೂಲಿ ಕಾರ್ಮಿಕ ಲೋಕೇಶ್ – ಭವಾನಿ ದಂಪತಿಗಳು ವಾಸವಿದ್ದರು.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಭವಾನಿ ಮನೆ ಕೆಲಸದಲ್ಲಿ ತೊಡಗಿಕೊಂಡಿರುವ ಸಂದರ್ಭ ಆಕಸ್ಮಿಕವಾಗಿ ಮನೆ ಸಂಪೂರ್ಣ ಮುರಿದು ಬಿದ್ದು ಚಾವಣಿಗೆ ಅಳವಡಿಸಿದ ಹಂಚುಗಳು,ಮನೆಯಲ್ಲಿದ್ದ ಪಾತ್ರೆ ಪಗಡಿ ಸಾಮಾನುಗಳು ನುಜ್ಜುಗುಜ್ಜಾಗಿ ನಷ್ಟ ಸಂಭವಿಸಿದೆ.
ಈ ಸಂದರ್ಭ ಭವಾನಿ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಸತ್ ಜೀವಪಾಯದಿಂದ ಪಾರಾಗಿದ್ದಾರೆ . ಇದೀಗ ಅಲ್ಲೇ ಸಮೀಪದ ಬಂಧುಗಳ ಮನೆಯಲ್ಲಿ ಲೋಕೇಶ್ – ಭವಾನಿ ದಂಪತಿಗಳ ಕುಟುಂಬ ಆಶ್ರಯ ಪಡೆದಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ದೂರನ್ನು ನೀಡಲಾಗಿದ್ದು, ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಸ್ಪಂದಿಸಿ, ನಿರ್ಗತಿಕ ಕುಟುಂಬಕ್ಕೆ ಸೂಕ್ತ ಪರಿಹಾರದ ಭರವಸೆಯನ್ನು ನೀಡಿದ್ದಾರೆ.
ವರದಿ : ದುಗ್ಗಳ ಸದಾನಂದ