ಮಡಿಕೇರಿ ಮಾ.9 NEWS DESK : ಮಡಿಕೇರಿ ಕುಮಾರೀಸ್ ಲೈಟ್‍ಹೌಸ್ ನಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಶಿವ ದ್ವಜರೋಹಣ ಹಾಗೂ 88 ನೇ ತ್ರಿಮೂರ್ತಿ ಶಿವ ಜಯಂತಿ ಪ್ರಯುಕ್ತ 88 ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಲಾಯಿತು. ಸಂಜೆ ಶಿವ ಭಕ್ತಿ ಗೀತೆಗಳ ಭಜನಾ ಕಾರ್ಯಕ್ರಮ ನಡೆಯಿತು.
ನೆರೆದಿದ್ದ ಎಲ್ಲರು ವಿಶೇಷ ಜ್ಯೋತಿರ್ಲಿಂಗ ದರ್ಶನ ಪಡೆದರು.
ಶಿವರಾತ್ರಿಯ ಪ್ರಯುಕ್ತ ಮಾ.11ರಿಂದ 20ರ ವರೆಗೆಬೆಳಿಗ್ಗೆ ಮತ್ತು ಸಂಜೆ 6.30 ರಿಂದ 7.30ರ ವರೆಗೆ ರಾಜಯೋಗ ಧ್ಯಾನದ ಉಚಿತ ತರಬೇತಿ ನಡೆಯಲಿದ್ದು, ಆಸಕ್ತರು ಶಿಬಿರವನ್ನು ಸದುಪಯೋಗಿಸಿಕೊಳ್ಳಬಹುದು.









