ಕುಶಾಲನಗರ ಮಾ.9 NEWS DESK : ಗ್ರಾಮೀಣರ ಕೃಷಿ ಬದುಕು ಗ್ರಾಮ ಜೀವನ, ಆಹಾರ ಪದ್ಧತಿಗಳೆಲ್ಲವೂ ಜಾನಪದ ಸಂಸ್ಕೃತಿಯ ಭಾಗ ಎಂದು ನಿವೃತ್ತ ಜಂಟಿ ಕೃಷಿ ನಿರ್ದೇಶಕ ಟಿ.ಡಿ.ಗಣೇಶ್ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹೆಬ್ಬಾಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ಸುವರ್ಣ ಕರ್ನಾಟಕ -50 ರ ಸಂಭ್ರಮ ಆಚರಣೆ ಅಂಗವಾಗಿ ಹೆಬ್ಬಾಲೆ ಗ್ರಾಮಸಿರಿ ಆಚರಣಾ ಸಮಿತಿ ಸಹಯೋಗದೊಂದಿಗೆ ಹೆಬ್ಬಾಲೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಜಾನಪದ ಗ್ರಾಮಸಿರಿ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಿಲ್ಲೆಯಲ್ಲಿಯೇ ಹೆಚ್ಚು ಕೃಷಿ ಕುಟುಂಬಗಳು ನೆಲೆಸಿರುವ ಹೆಬ್ಬಾಲೆಯಲ್ಲಿ ಇಂತಹ ಗ್ರಾಮೀಣ ಗ್ರಾಮಸಿರಿ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವವರನ್ನು ಸ್ಥಳೀಯವಾಗಿ ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವುದನ್ನು ಗಣೇಶ್ ಶ್ಲಾಘಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ತೊರೆನೂರು ಗ್ರಾಮದ ನಿವೃತ್ತ ಜಂಟಿ ಕೃಷಿ ನಿರ್ದೇಶಕ ಟಿ.ಡಿ.ಗಣೇಶ್, ಶಿರಂಗಾಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ, ಶಿರಂಗಾಲದ ನಿವೃತ್ತ ಆರ್.ಎಫ್.ಓ.ಪಿ.ಸಿ.ಬೇಲಯ್ಯ, ಮರೂರು ಗ್ರಾಮದ ಹಿರಿಯ ರೈತ ಶಿವರುದ್ರಪ್ಪ, ತೊರೆನೂರು ಗ್ರಾಮದ ತೊರೆನೂರಿನ ಟಿ.ಡಿ.ಸೋಮಣ್ಣ, ಸೂಲಗಿತ್ತಿ ಜಾನಕಮ್ಮ, ಹೆಬ್ಬಾಲೆಯ ಜಯಲಕ್ಷ್ಮಿ ಕಾಳಪ್ಪ, ಕಲಾವಿದ ರಾಘವ ಹೆಬ್ಬಾಲೆ ಅವರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಡಿ.ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಗೌರವ ಕಾರ್ಯದರ್ಶಿ ರೇವತಿ ರಮೇಶ್, ಪದಾಧಿಕಾರಿ ಎಂ.ಎನ್.ವೆಂಕಟನಾಯಕ್, ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿಗಳಾದ ಎಸ್.ನಾಗರಾಜ್, ಟಿ.ವಿ.ಶೈಲಾ, ಕೋಶಾಧಿಕಾರಿ ಕೆ.ವಿ.ಉಮೇಶ್, ನಿರ್ದೇಶಕ ಎಂ.ಎನ್.ಕಾಳಪ್ಪ,
ಕಸಾಪ ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಗ್ರಾ.ಪಂ.ಅಧ್ಯಕ್ಷೆ ಅರುಣಕುಮಾರಿ, ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಡಿ.ಸೋಮಣ್ಣ, ಆರ್ಥಿಕ ಸಮಿತಿಯ ಅಧ್ಯಕ್ಷ ಎಚ್.ಕೆ.ನಟೇಶ್ ಗೌಡ,,ವಿವಿಧ ಉಪ ಸಮಿತಿಯ ಪ್ರಮುಖರಾದ ಎಚ್.ಎಲ್.ರಮೇಶ್, ಟಿ.ಬಿ.ಜಗದೀಶ್ , ಕೆ.ಎಸ್.ಕೃಷ್ಣೇಗೌಡ,
ಎಚ್.ಎಸ್.ಲೋಕೇಶ್, ಹಳೇಗೋಟೆ ಮಂಜುನಾಥ್, ಪ್ರಾಥಮಿಕ ಶಾಲಾ ಮುಖ್ಯ ಎಚ್.ಜಿ.ಕುಮಾರ್, ಎಚ್.ಎಂ.ವೆಂಕಟೇಶ್ ಇತರರು ಇದ್ದರು.









