ಮಡಿಕೇರಿ ಮಾ.9 NEWS DESK : ಈಜಲು ಹೋಗಿದ್ದ ಯುವಕನೊಬ್ಬ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುಡ್ಡೆಹೊಸೂರು ಸಮೀಪದ ನಂಜರಾಯಪಟ್ಟಣದಲ್ಲಿ ನಡೆದಿದೆ.
ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಕರೆ ಗ್ರಾಮದ ನಿವಾಸಿ ಶಂಭು ಹಾಗೂ ಮೀನಾ ದಂಪತಿ ಪುತ್ರ ಶರತ್(24) ಮೃತ ದುರ್ದೈವಿ. ಶರತ್ ಶನಿವಾರ ತನ್ನ ನಾಲ್ವರು ಸ್ನೇಹಿತರ ಜೊತೆ ನಂಜರಾಯಪಟ್ಟಣದ ದಾಸವಾಳ ಎಂಬಲ್ಲಿ ಈಜಲು ಕಾವೇರಿ ನದಿಗೆ ಇಳಿದಿದ್ದಾನೆ. ಈ ವೇಳೆ ಆಳ ಪ್ರದೇಶದಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












