ಮಡಿಕೇರಿ ಮಾ.13 NEWS DESK : ನಾಡಿನ ಹೆಸರಾಂತ ಚಿನ್ನಾಭರಣ ಸಂಸ್ಥೆಯಾಗಿರುವ ಮುಳಿಯ ಜ್ಯುವೆಲ್ಲರ್ಸ್ ನ ಅಂಗಸಂಸ್ಥೆಯಾದ ಮುಳಿಯ ಪ್ರತಿಷ್ಠಾನದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಕೊಡಗು ಜಿಲ್ಲೆಯ ವಿವಿಧ ಕ್ಷೇತ್ರಗಳ 9 ಸಾಧಕಿಯರಿಗೆ ಮುಳಿಯ ನವರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಕೃಷಿ, ಸಾಹಿತ್ಯ, ಶಿಕ್ಷಣ, ಉದ್ಯಮ, ಸಮಾಜಸೇವೆ, ಕ್ರೀಡೆ, ಕಲಾವಿದೆ, ಬಾಲಪ್ರತಿಭೆ ಮತ್ತು ಮಹಿಳಾ ಸಂಘ-ಸಂಸ್ಥೆಗಳಿಗೆ ನವರತ್ನ ಪ್ರಶಸ್ತಿಯನ್ನು ಮುಳಿಯ ಪ್ರತಿಷ್ಠಾನದ ವತಿಯಿಂದ ನೀಡಿ ಗೌರವಿಸಲಾಗುತ್ತದೆ. ಆಯ್ಕೆಯಾದ ಸಾಧಕಿಯರಿಗೆ ಚಿನ್ನದ ಪದಕ, 5 ಸಾವಿರ ರು. ನಗದು ನೀಡಿ ಪುರಸ್ಕರಿಸಲಾಗುತ್ತದೆ. ಸಾಧಕಿಯರ ಆಯ್ಕೆಗೆ ಸಾವ೯ಜನಿಕ ವಲಯದಿಂದ ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದ್ದು, ಅತ್ಯಂತ ಪಾರದಶ೯ಕವಾಗಿ ಈ ಸಮಿತಿಯು ಮುಳಿಯ ನವರತ್ನ ಪ್ರಶಸ್ತಿಗೆ ಸಾಧಕಿಯರನ್ನು ಆಯ್ಕೆ ಮಾಡಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಈ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಸಾಧಕಿಯರಿಂದ ಮಾಹಿತಿ ಆಹ್ವಾನಿಸಲಾಗಿದೆ. ಸಾಧಕಿಯರು ತಮ್ಮ ಸಾಧನೆಗಳನ್ನು ಸೂಕ್ತ ಮಾಹಿತಿಯೊಂದಿಗೆ ನೀಡಬಹುದಾಗಿದೆ. ಅಂತೆಯೇ ತಮಗೆ ಪರಿಚಯವಿರುವ ಅಹ೯ ಸಾಧಕಿಯರ ಬಗ್ಗೆಯೂ ಇತರರೂ ಮಾಹಿತಿ ನೀಡಬಹುದಾಗಿದೆ.
ಇಂಥ ಮಾಹಿತಿಯನ್ನು ಏ.5 ರೊಳಗಾಗಿ ಮಡಿಕೇರಿ ಅಥವಾ ಗೋಣಿಕೊಪ್ಪಲುವಿನಲ್ಲಿರುವ ಮುಳಿಯ ಜ್ಯುವೆಲ್ಲರ್ಸ್ ಕಛೇರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸತಕ್ಕದ್ದು. ಅಥವಾ ಈ ವಾಟ್ಸಪ್ ಸಂಖ್ಯೆಗೆ ಮಾಹಿತಿ ಕಳುಹಿಸಬಹುದಾಗಿದೆ. ವಾಟ್ಸಪ್ ಸಂಖ್ಯೆ – 8494937916