ಸಿದ್ದಾಪುರ ಮಾ.13 NEWS DESK : ಧಾರ್ಮಿಕ ಆಚರಣೆಗಳ ಮೂಲಕ ಆಚಾರ ವಿಚಾರ ಸಂಸ್ಕೃತಿ ಪರಂಪರೆಯೊಂದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯವಾಗಲಿದೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಅಮ್ಮತ್ತಿ ಸಮೀಪದ ಪುಲಿಯೇರಿ ಗ್ರಾಮದಲ್ಲಿರುವ ಮಂಗುಯಿಯಿಲ್ ಶ್ರೀ ಭಗವತಿ ಕ್ಷೇತ್ರದ ವಾರ್ಷಿಕ ಮಹೋತ್ಸವ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗ್ರಾಮಗಳಲ್ಲಿರುವ ದೇವಾಲಯಗಳಲ್ಲಿ ಭಕ್ತಿ ಪೂರಕವಾಗಿ ಇಷ್ಟಾರ್ಥ ಪ್ರಾರ್ಥನೆ ಮಾಡಿದರೆ
ಉತ್ತಮ ಮಳೆ ಬೆಳೆ ಅಭಿವೃದ್ಧಿಯೊಂದಿಗೆ ಶಾಂತಿ ಸಹ ಬಾಳ್ವೆಯ ಜೀವನ ನಡೆಸಲು ಸಾಧ್ಯವಾಗಲಿದೆ. ಇಂತಹ ಆಚರಣೆಗಳ ಮೂಲಕ ಎಲ್ಲರೂ ಒಗ್ಗೂಡಿ ಧಾರ್ಮಿಕ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದರು.
ಎಸ್.ಎನ್.ಡಿ.ಪಿ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶ್ರೀ ಭಗವತಿ ದೇವಸ್ಥಾನ ಪ್ರಾರಂಭಿಸಿ ಧಾರ್ಮಿಕ ಪೂಜಾ ಕಾರ್ಯಗಳನ್ನು ಮಾಡುವುದರೊಂದಿಗೆ ವಾರ್ಷಿಕ ಪೂಜಾ ಮಹೋತ್ಸವವನ್ನು ಆಚರಣೆ ಮಾಡುವ ಮೂಲಕ ಈ ಭಾಗದ ಹೆಚ್ಚಿನ ಸಂಖ್ಯೆಯ ಭಕ್ತರ ಇಷ್ಟಾರ್ಥ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಿರುವ ಮಂಗುಯಿಯಿಲ್ ಕುಟುಂಬಸ್ಥರ ಸೇವಾ ಕಾರ್ಯ ಜಿಲ್ಲೆಗೆ ಮಾದರಿಯಾಗಿದೆ. ಹಿಂದೂ ಧರ್ಮ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಧರ್ಮವಾಗಿದ್ದು ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯ ಧಾರ್ಮಿಕ ನಂಬಿಕೆಗಳೊಂದಿಗೆ ಇಂತಹ ಆಚರಣೆಗಳನ್ನು ಮಾಡುತ್ತಿದ್ದೇವೆ. ನಾವೆಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಹಬ್ಬ ಆಚರಣೆಗಳ ಮೂಲಕ ಶಾಂತಿ ಸಹ ಬಾಳ್ವೆಯ ನೆಮ್ಮದಿಯ ಜೀವನ ನಡೆಸುವಂತಹ ಆಗಬೇಕೆಂದು ಹೇಳಿದರು.
ಈ ಸಂದರ್ಭ ಮಂಗುಯಿಯಿಲ್ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಎಂ.ಟಿ.ಶಶಿ, ಕಾರ್ಯದರ್ಶಿ ಎ.ವಿ.ಶೀಲ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್, ಸಮಿತಿಯ ಪ್ರಮುಖರಾದ ಪ್ರದೀಪ್, ಸಿಜಿಲ್, ಮನು, ಅಭಿಜಿತ್, ಶಶಿಧರನ್, ಚಂದ್ರನ್, ರದೀಶ್, ರಾಜೇಶ್, ನಿತಿನ್, ರಿಜೇಶ್, ಸುರೇಶ್, ಕಲೇಶ್,ಆಕಾಶ್, ರಾಮಕೃಷ್ಣ ಮತ್ತಿತರರು ಹಾಜರಿದ್ದರು.
Breaking News
- *ಸಾಮಾನ್ಯ ವರ್ಗಕ್ಕೆ ಸಹಾಯವಾಗದ ಬಜೆಟ್*
- *ಸ್ವಾವಲಂಬಿ ಭಾರತಕ್ಕೆ ಪೂರಕವಾದ ಜನಪರ ಬಜೆಟ್*
- *ದೆಹಲಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಜೆಟ್*
- *ಮಡಿಕೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ : ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಕೊಡುಗೆ ಅಪಾರ : ಬಿ.ಸಿ.ಶಂಕರಯ್ಯ*
- *ವಿರಾಜಪೇಟೆ : ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು : ಅನೂಪ್ ಮಾದಪ್ಪ ಕರೆ*
- *ದೀಪ್ತಿ ದೇಚಮ್ಮ ಗೆ ಪಿ.ಹೆಚ್.ಡಿ ಪದವಿ ಪ್ರದಾನ*
- *ಜನಪರ ಮತ್ತು ರೈತಪರ ಬಜೆಟ್ : ತೇಲಪಂಡ ಶಿವಕುಮಾರ್ ನಾಣಯ್ಯ*
- *ರಾಜ್ಯದ ಹಿತಕ್ಕೆ ನಿರಾಶದಾಯಕ ಬಜೆಟ್ : ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ : ಸಿಎಂ ಸಿದ್ದರಾಮಯ್ಯ ಅಸಮಾಧಾನ*
- *ಮುಖ್ಯಮಂತ್ರಿಗಳ ಕೊಡಗು ಭೇಟಿ ನಿರಾಶಾದಾಯಕ*
- *ಕೊಡಗು : ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ*