ನಾಪೋಕ್ಲು ಮಾ.13 : ಕೊಟ್ಟಮುಡಿ ಮಾರ್ಕಝುಲ್ ಹಿದಾಯದ ಸಂಸ್ಥೆಯ ಅಧೀನದಲ್ಲಿ ಆರ್‍ಸಿಎಫ್‍ಐ ಅನುದಾನದಡಿ ನಿರ್ಮಿಸಿದ “ಕಾಫಿಲ “ಸಂಸ್ಥೆಯನ್ನು ಮರ್ಕಝ್ ನಾಲೆಜ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮರ್ಕಝುಲ್ ಹಿದಾಯ ಕೊಡಗು ಸಂಸ್ಥೆಯ ಅಧ್ಯಕ್ಷ ಡಾ. ಮೊಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಅನಾಥ ಮಕ್ಕಳಿಗೆ ಅನ್ನ ಮತ್ತು ವಸತಿಯನ್ನು ಮಾತ್ರ ನೀಡಿದರೆ ಸಾಲದು , ಅವರಿಗೆ ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಉತ್ತಮ ಶಿಕ್ಷಣ ಹಾಗೂ ಉತ್ತಮ ನಡತೆಯನ್ನು ಕಲಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಆ ಕೆಲಸವನ್ನು ಮರ್ಕಝುಲ್ ಸಂಸ್ಥೆ ಮಾಡಲಿದೆ ಅದಕ್ಕೆ ದಾನಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭಾ ಕಾರ್ಯಕ್ರಮವನ್ನು ಎಸ್‍ವೈಎಸ್ ರಾಜ್ಯ ನಾಯಕ ಸೈಯದ್ ಇಲ್ಯಾಸ್ ತಙಳ್ ಉದ್ಘಾಟಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಅಹಮದ್ ಹಾಜಿ, ಮೊಹಿದ್ದೀನ್ ಕುಟ್ಟಿ ಹಾಜಿ, ಕಾರ್ಯದರ್ಶಿ ಯೂಸುಫ್ ಹಾಜಿ ಕೋಶಾಧಿಕಾರಿ ಅಬ್ದುಲ್ಲಾ, ನಿರ್ದೇಶಕರಾದ ಮಹಮ್ಮದ್ ಹಾಜಿ ಕುಂಜಿಲ, ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಹಾಗೂ ನಿರ್ದೇಶಕ ಲತೀಫ್ ಸುಂಟಿಕೊಪ್ಪ, ನಿರ್ದೇಶಕ ಕೊಹಿನೂರ್ ಅಬ್ದುಲ್ ರಹಿಮಾನ್ ಹಾಜಿ , ಹೊದ್ದೂರು ಗ್ರಾ.ಪಂ ಸದಸ್ಯ ಎಂ.ಬಿ. ಹಮೀದ್ , ಕೊಡಗು ಜಮಯತುಲ್ ಉಲೇಮಾ ಕೋಶಾಧಿಕಾರಿ ಹುಸೈನ್ ಸಖಾಫಿ , ಕೊಟ್ಟಮುಡಿ ಜಮಾತ್ ಅಧ್ಯಕ್ಷ ಉಸ್ಮಾನ್ ಹಾಜಿ, ಅಜಾದ್ ನಗರ ಜಮಾತ್ ಅಧ್ಯಕ್ಷ ಅಬೂಬಕ್ಕರ್, ಎಸ್‍ವೈಎಸ್ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಎಮ್ಮೆಮಾಡು ಜಮಾತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಜುಬೇರ್ ಸಖಾಫಿ, ಕಾರ್ಯದರ್ಶಿ ಜುನೈದ್, ಅಬ್ದುಲ್ಲ ಸಖಾಫಿ , ಹೊದ್ದೂರು ಗ್ರಾಮ ಪಂಚಾಯತ್ ಸದಸ್ಯ ಮೋಯ್ದು , ಉಪನ್ಯಾಸಕ ನೌಶಾದ್, ಮೊಯಿದಿನ್ ಬಾಳುಗೊಡ್ , ಮೋಯಿದು ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಮರ್ಕಝ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಸ್ವಾಗತಿಸಿದರು.
ವರದಿ : ದುಗ್ಗಳ ಸದಾನಂದ.