ಸುಂಟಿಕೊಪ್ಪ ಮಾ.14 NEWS DESK : ಕಾಜೂರಿನ ಶ್ರೀ ಹರಿಹರ ಯುವಕ ಸಂಘದ 33ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶಿವರಾತ್ರಿ ಉತ್ಸವ ಕಾರ್ಯಕ್ರಮವನ್ನು ಐಗೂರು ಗ್ರಾ.ಪಂ ಅಧ್ಯಕ್ಷ ಜಿ.ಕೆ.ವಿನೋದ್, ಕಾಜೂರು ಕಾಫಿ ತೋಟದ ವ್ಯವಸ್ಥಾಪಕ ರಾಬಿನ್ ಪೆಮ್ಮಯ್ಯ ಉದ್ಘಾಟಿಸಿದರು.
ಕ್ರೀಡಾಕೂಟಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ರಾಬಿನ್ ಪೆಮ್ಮಯ್ಯ ಗ್ರಾಮೀಣ ಕ್ರೀಡಾಕೂಟಗಳು ಉಳಿಯಬೇಕಾದರೆ, ಪ್ರತಿ ಗ್ರಾಮಗಳಲ್ಲಿಯೂ ಹೆಚ್ಚಿನ ಗ್ರಾಮೀಣ ಕ್ರೀಡಾಕೂಟಗಳು ಆಯೋಜನೆಗೊಳ್ಳಬೇಕು, ಕ್ರೀಡಾಕೂಟದಿಂದ ಮಾನಸಿಕ ಸ್ಥರ್ಯ, ಬಾಂಧವ್ಯ ಬೆಸೆಯಲು ಸಹಕಾರಿಯಾಗಲಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕಳೆದ 33ವರ್ಷಗಳಿಂದ ಸಂಘವೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿರುವ ಬಗ್ಗೆ ಶ್ಲಾಘಿಸಿದರು, ರಾಜಕೀಯ ಬದಿಗಿರಿಸಿ ಗ್ರಾಮದ ಅಭಿವೃದ್ಧಿಗೆ ಜೊತೆಯಾಗಿ ನಿಲ್ಲುವುದರೊಂದಿಗೆ ಸಂಘದ ಮುಂದುವರೆದ ಕಾಮಗಾರಿಗೆ ಸರ್ಕಾರದಿಂದ ಅನುದಾನ ಕೊಡಿಸಿಕೊಡುವುದಾಗಿ ಭರವಸೆ ನೀಡಿದರು.
ರಾಮನಗರ ಜಿಲ್ಲೆಯ ಮುರಾರಿ ಸ್ವಾಮಿಗಳ ಪುಣ್ಯಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಕುಮಾರಸ್ವಾಮಿಗಳು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸೋಮವಾರಪೇಟೆ ತಾಲ್ಲೂಕಿನ ಯೋಜನಾಧಿಕಾರಿ ರೋಹಿತ್, ಸಂಘದ ಮುಂದುವರೆದ ಕಾಮಾಗಾರಿಗೆ ರೂ ಎರಡು ಲಕ್ಷದ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಜಿ.ಕೆ.ಅವಿಲಾಷ ವಹಿಸಿದರು, ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಕಂಬೇಯಂಡ ಸೀತಾಲಕ್ಷ್ಮೀ ಅಪ್ಪಯ್ಯ, ಮಣವಟ್ಟಿರ ಶಾರದಾ ಮಂದಣ್ಣ, ಜಿ.ಪಂ ಮಾಜಿ ಅಧ್ಯಕ್ಷವಿ.ಎಂ.ವಿಜಯ, ಪಿ.ಡಿ.ಪ್ರಕಾಶ್, ಎ.ಕೆ.ಉಣ್ಣೀಕೃಷ್ಣ, ಮಚ್ಚಂಡ ಪ್ರಕಾಶ್. ಡಿ.ಡಿ.ಬೆಳ್ಳಿಯಪ್ಪ, ಗ್ರಾ.ಪಂ ಸದಸ್ಯ ಬಾರನ ಪ್ರಮೋದ್, ಟಿ.ಅರ್.ವಿಜಯ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಮಂಥರ್ ಗೌಡ ಹಾಗೂ ಐಗೂರು ಗ್ರಾ.ಪಂ ಅಧ್ಯಕ್ಷ ಜಿ.ಕೆ.ವಿನೋದ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ರೋಹಿತ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
2022-23 ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಗ್ರಾಮ ಬೆಸಿಲ್ ಸೇರಿದಂತೆ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮಕ್ಕಳಿಗೆ, ಸಾರ್ವಜನಿಕರಿಗೆ ಕ್ರೀಡಾಕೂಟ ಜರುಗಿದವು, ಗ್ರಾಮೀಣ ಪ್ರತಿಭೆಗಳ, ಶಾಲಾ-ಕಾಲೇಜು ಮಕ್ಕಳ, ಸಾರ್ವಜನಿಕರ ನೃತ್ಯ ಕಾರ್ಯಕ್ರಮ ಗಮನ ಸೆಳೆದವು.
ಸಂಘದ ಉಪಾಧ್ಯಕ್ಷ ಟಿ.ಕೆ.ಭಾಸ್ಕರ್, ಕಾರ್ಯದರ್ಶಿ ರಕ್ಷಿತ್, ಉಪ ಕಾರ್ಯದರ್ಶಿ ಎಂ.ಕೆ.ಮೋಹನ್, ಖಜಾಂಚಿ ಹೆಚ್.ಕೆ.ವಸಂತ್, ಆಡಳಿತ ಮಂಡಳಿಯ ಸುಗು, ಪ್ರದೀಪ, ಪ್ರಭಾಕರ್, ಸುಧಿ ಎಂ.ಜಿ.ರಾಜ ಹಾಗೂ ಸದಸ್ಯರುಗಳು ಹಾಜರಿದ್ದರು. ಟಿ.ಅರ್.ವಿಜಯ ಸ್ವಾಗತಿಸಿ, ಎಂ.ಕೆ.ಮೋಹನ್ ವಂದಿಸಿದರು.