ಮಡಿಕೇರಿ ಮಾ.14 NEWS DESK : ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಂಬಂಧ ಕೊಡಗು ಜಿಲ್ಲೆಗೆ ಅಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಅವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಂಜಯ ಜೀವಿಜಯ, ಕೆ.ಸಿ.ಶಾರಿ ಗಿರೀಶ, ಕೆ.ಸಿ.ಭೀಮಯ್ಯ, ಸಿ.ಎ.ನಾಸೀರ್., ಪಂಕಜ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದೆ. ಹಾಗೆಯೇ ಕೃಷ್ಣ ಕುಟ್ಟಂಡ, ಅಣ್ಣಯ್ಯ, ಅಬ್ದುಲ್ ರಹೀಮಾನ್(ಬಾಪು), ಸುಂದರ್, ಕೆ.ಎಂ.ಬಶೀರ್, ಮುಸ್ತಾಪ ನೆಲ್ಲಿಹುದಿಕೇರಿ, ಹರಿ ಪ್ರಸಾದ್, ಪಿ.ಎಲ್.ಸುರೇಶ್, ಧನ್ಯ, ಕೆ.ಜಿ.ಪೀಟರ್, ವಿ.ಪಿ.ಶಶಿಧರ ಕುಶಾಲನಗರ, ಕಾಂತರಾಜ್ ಸೋಮವಾರಪೇಟೆ, ಎಂ.ಜಿ.ಮೋಹನ್ ದಾಸ್ ಮಡಿಕೇರಿ, ಜಾನ್ಸನ್ ವಿರಾಜಪೇಟೆ, ಕೆ.ಎ. ಪ್ರಶಾಂತ್ ಪೊನ್ನಂಪೇಟೆ, ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿದೆ. ಸದಸ್ಯ ಕಾರ್ಯದರ್ಶಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಿದೆ.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಮತ್ತು ಯುವ ನಿಧಿ ಯೋಜನೆಗಳು ಈಗಾಗಲೇ ಜಾರಿಗೊಂಡಿದ್ದು, ಈ ಗ್ಯಾರಂಟಿ ಯೋಜನೆಯ ಲಾಭ ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪುತ್ತಿದೆಯೇ ಎಂಬ ಬಗ್ಗೆ ಮೇಲ್ವಿಚಾರಣೆಗಾಗಿ ಸಾಂಸ್ಥಿಕ ಕಾರ್ಯ ವಿಧಾನಗಳನ್ನು ಜಾರಿಗೆ ತರಲು ಕೊಡಗು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.









