ಮಡಿಕೇರಿ ಮಾ.15 NEWS DESK : ಬದಲಾವಣೆಯನ್ನು ತಂದುಕೊಟ್ಟ ಜನತೆಗೆ ನಾವು ಅಭಿವೃದ್ಧಿಯನ್ನು ತಂದುಕೊಡುತ್ತೇವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಭಾಗಮಂಡಲ ಗ್ರಾ.ಪಂ ವ್ಯಾಪ್ತಿಯ ಚೇರಂಗಾಲ-ಮತ್ತಾರಿ-ಪರಿವಾರ ಮನೆ ನೂತನ ಸಂಪರ್ಕ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಗ್ರಾಮೀಣ ಜನರಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ನಾನು ಮತ್ತು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ ರೂ.250 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಸಾಕಷ್ಟು ಕೆಲಸಗಳು ಪೂರ್ಣಗೊಂಡು ಜನರಿಗೆ ಒಳಕೆಯಾಗುತ್ತಿದೆ. ಉಳಿದಂತೆ ಮತ್ತಷ್ಟು ಕಾರ್ಯಗಳಿಗೆ ಭೂಮಿ ಪೂಜೆ ಮಾಡಿದ್ದೇವೆ ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ಮುಂಗಾರು ಮಳೆ ಪ್ರಾರಂಭವಾಗುವ ಕಾರಣ ಅಭಿವೃದ್ಧಿ ಕೆಲಸಗಳು ಮುಂದೂಡಬಾರದು ಎಂಬ ಕಾರಣಕ್ಕೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ. ಎಲ್ಲರ ಸಹಕಾರ ಮತ್ತು ಬೆಂಬಲವನ್ನು ಮುಂದೆಯೂ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯರಾದ ರಮಾನಾಥ್ ಬೇಕಲ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಡಿಸಿಸಿ ಸದಸ್ಯ ಸುನೀಲ್ ಪತ್ರವೋ, ವಲಯ ಕಾರ್ಯಾಧ್ಯಕ್ಷ ವೆಂಕಟೇಶ್ ಕೋಳಿಬೈಲು, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಮಡಿಕೇರಿ ತಾಲೂಕು ಸದಸ್ಯ ಬಿ.ಎಮ್.ರಂಗಪ್ಪ, ಬೂತ್ ಅಧ್ಯಕ್ಷ ಸಿರಕಜೆ ಡಿಪ್ಪು, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಾಜ್ ಹೊಸೂರು, ಪ್ರಮುಖರಾದ ಅಬ್ದುಲ್ ಲತೀಫ್, ಪರಿವಾರ ಶಿವರಾಮ್, ಪರಿವಾರ ತಿಮ್ಮಯ್ಯ, ಪರಿವಾರ ದಯಾನಂದ ಮತ್ತು ಮತ್ತಾರಿ ಕುಟುಂಬಸ್ಥರು, ತಣ್ಣಿಮನಿ ಬೂತ್ ಅಧ್ಯಕ್ಷ ಸಾಬು ತಿಮ್ಮಯ್ಯ, ದಂಡಿನ ಪೂರ್ಣೇಶ್, ಬಾರಿಕೆ ಕೃಷ್ಣರಾಜು, ಕೋಳಿಕಾಡು ತಿಮ್ಮಯ್ಯ, ಪೆರುಬಾಯಿ ಅಜಿತ್, ಪಾಂಡಿ ಲಕ್ಷ್ಮಣ ಹಾಗೂ ಇತರರು ಹಾಜರಿದ್ದರು.
ಕಾರ್ಯಕ್ರಮದ ನಂತರ ಚೇರಂಗಾಲ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.
ಇತ್ತೀಚೆಗೆ ನಿಧನ ಹೊಂದಿದ ಚೇರಂಗಾಲ ಕಾಂಗ್ರೆಸ್ ಪ್ರಮುಖರಾದ ಪೆರುಬಾಯಿ ವಿಜಯ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.









