ಮಡಿಕೇರಿ ಮಾ.15 NEWS DESK : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆಯ ವತಿಯಿಂದ ಮಾ.18ರ ವರೆಗೆ ಪುಣೆಯ ಸಂಗಮ್ಮ ವಿಶ್ವ ಕೇಂದ್ರದಲ್ಲಿ ನಡೆಯುತ್ತಿರುವ ಗೈಡ್ ಕ್ಯಾಪ್ಟನ್ಸ್ ಸಮಾವೇಶದಲ್ಲಿ ವಿರಾಜಪೇಟೆ ಅರಮೇರಿ ಎಸ್.ಎಂ.ಎಸ್ ವಿದ್ಯಾಸಂಸ್ಥೆಯ ಶಿಕ್ಷಕಿ ಮೈಥಿಲಿರಾವ್ (ಂಐಖಿ) ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ.
ಇವರು ರಾಜ್ಯದಲ್ಲೇ ಉತ್ತಮ ತರಬೇತಿ ನಾಯಕಿ ಆಗಿದ್ದು. ಕೊಡಗು ಜಿಲ್ಲಾ ಸಂಸ್ಥೆಯಲ್ಲಿ ಗೈಡ್ ವಿಭಾಗದ ತರಬೇತಿ ನಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಹಂತದ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದವರಾಗಿದ್ದು, ಅನೇಕ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಮತ್ತು ರಾಜ್ಯ ಪುರಸ್ಕಾರವನ್ನು ಕೊಡಗಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








