ನಾಪೋಕ್ಲು ಮಾ.20 NEWS DESK : ಸಮೀಪದ ಹಳೆ ತಾಲೂಕಿನ ಭಗವತಿ ದೇವಾಲಯದ ವಾರ್ಷಿಕ ಉತ್ಸವು ಶ್ರದ್ಧಾಭಕ್ತಿಯಿಂದ ನಡೆಯಿತು.
ಮಾ.17 ರಿಂದ ಉತ್ಸವ ಆರಂಭಗೊಂಡಿದ್ದು, ದೇವರ ನೃತ್ಯಬಲಿ, ಸಾಂಪ್ರದಾಯಿಕ ಎತ್ತು ಹೋರಾಟ, ಬೊಳಕಾಟ್ ಪ್ರದರ್ಶನ ಬಳಿಕ ವಿವಿಧ ಪೂಜಾ ವಿಧಾನಗಳು ಜರುಗಿತು. ನಂತರ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ದೇವಾಲಯದ ಮುಖ್ಯ ಅರ್ಚಕ ಹರೀಶ್ ಭಟ್ ಹಾಗೂ ತಂತ್ರಿಗಳಾಗಿ ಗಿರೀಶ್ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಟ್ಟರು.
ಪಟ್ಟಣಿ ಹಬ್ಬದಲಿ ಪಾಲ್ಗೊಂಡಿದ್ದ ಭಕ್ತರಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸಂಜೆ ದೇವರ ನೃತ್ಯಬಲಿ ಜರುಗಿತು.
ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಲ್ಲೆಟಿರ ಗುರುವಪ್ಪ, ಕಾರ್ಯದರ್ಶಿ ಕಂಗಂಡ ಜಾಲಿ ಪೂವಪ್ಪ, ಉಪಾಧ್ಯಕ್ಷ ಬೊಪ್ಪಂಡ ಕುಶಾಲಪ್ಪ , ಹಿರಿಯರಾದ ಬೊಪ್ಪೆರ ಕಾವೇರಪ್ಪ , ದೇವತಕ್ಕರಾದ ನಾಟೋಳoಡ ಕುಟುಂಬಸ್ಥರು ಹಾಗೂ ದೇವಾಲಯದ ಇತರ ತಕ್ಕ ಮುಖ್ಯಸ್ಥರು, ಊರ ಹಾಗೂ ಪರ ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.
ಮಾ.21ರಂದು ವಿವಿಧ ಕೋಲಗಳೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.
ವರದಿ : ದುಗ್ಗಳ ಸದಾನಂದ









