ಸಿದ್ದಾಪುರ ಏ.3 NEWS DESK : ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ 9ನೇ ವಾರ್ಷಿಕೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಸ್ವರ್ಧೆಯನ್ನು ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಅಧ್ಯಕ್ಷ ಮೈಕಲ್
ತಿಳಿಸಿದ್ದಾರೆ.
ಏ.7 ರಂದು ಬೆಳಗಿನಿಂದ ಸಂಜೆವರೆಗೆ ಸಿದ್ದಾಪುರ ಸ್ವರ್ಣಮಾಲಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಸಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ತಮಿಳು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪುರುಷರು, ಮಹಿಳೆಯರು, ಮಕ್ಕಳಿಗೆ ಸಂಸ್ಕೃತಿಕ ಕಾರ್ಯಕ್ರಮ ವಿವಿಧ ಕ್ರೀಡಾ ಸ್ಪರ್ಧೆ, ನೃತ್ಯ, ಸಂಗೀತಾ, ಮ್ಯಾಜಿಕ್ ಶೋ, ಸೇರಿದಂತೆ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ.
ಉದ್ಘಾಟನೆ ಹಾಗೂ ಸಮಾರಂಭ ಸಮಾರಂಭದಲ್ಲಿ ಜನಪ್ರತಿನಿಧಿಗಳು,ಸಮಾಜ ಸೇವಕರು, ದಾನಿಗಳು, ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಗಣ್ಯರಿಗೆ ವಿಶೇಷ ಸನ್ಮಾನ ಗೌರವ ಸಮರ್ಪಣೆ ಕಾರ್ಯಕ್ರಮವು ನಡೆಯಲಿದೆ ಎಂದರು.
ಈ ಸಂದರ್ಭ ಕಾವೇರಿ ತಮಿಳು ಸಂಘದ ಉಪಾಧ್ಯಕ್ಷರುಗಳಾದ ನಾಗರಾಜ್, ಕಣ್ಣನ್, ಕಾರ್ಯದರ್ಶಿ ಕುಮಾರ್,
ಸಹ ಕಾರ್ಯದರ್ಶಿ ಗಣೇಶ್, ಖಜಾಂಜಿ ಮುತ್ತು ವೇಲ್, ಆಡಿಟರ್ ಶೇಖರ್ ಸೇರಿದಂತೆ ಸಮಿತಿಯ ಪ್ರಮುಖರು ಹಾಜರಿದ್ದರು.
Breaking News
- *ಪ್ರಧಾನಿಯನ್ನು ಭೇಟಿಯಾದ ಸಿಎಂ, ಡಿಸಿಎಂ : ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ*
- *ಅಭಿವೃದ್ದಿಯಲ್ಲಿ ರಾಜಕಾರಣ ಮಾಡಲಾರೆ : ಶಾಸಕ ಎ.ಎಸ್.ಪೊನ್ನಣ್ಣ*
- *ಫೋಟೋಗ್ರಫಿ ಮತ್ತು ವೀಡಿಯೋಗ್ರಪಿ : ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ*
- *ನಕಲಿ ಪರಿಸರವಾದಿಗಳ ವಿರುದ್ಧ ಕ್ರಮಕ್ಕೆ ಸೇವ್ ಕೊಡಗು ಒತ್ತಾಯ*
- *ಕರಾಟೆ ಚಾಂಪಿಯನ್ಶಿಪ್ : ಪೆರುಂಬಾಡಿ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಪ್ರಿಯಾಂಕ ಗಾಂಧಿ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಕೊಡಗಿನ ಪುತ್ತರಿ ಆಚರಣೆಗೆ ದಿನ ನಿಗದಿ*
- *ನಾಪೋಕ್ಲುವಿನಲ್ಲಿ ಸಂಭ್ರಮದ 69ನೇ ಕನ್ನಡ ರಾಜ್ಯೋತ್ಸವ : ಕನ್ನಡ ಅಭಿಮಾನದ ಭಾಷೆಯಾಗಲಿ : ಎಂ.ಪಿ.ಕೇಶವ ಕಾಮತ್*
- *ಸೋಮವಾರಪೇಟೆಯಲ್ಲಿ ವಿಶೇಷ ಚೇತನರ ಕ್ರೀಡಾಕೂಟ : ವಿಕಲಚೇತನರನ್ನು ಸಮಾಜ ಗೌರವದಿಂದ ಕಾಣಬೇಕು : ಜೆ.ಕೆ.ಪೊನ್ನಪ್ಪ*
- *ಸೋಮವಾರಪೇಟೆಯಲ್ಲಿ ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆ*