ನಾಪೋಕ್ಲು ಏ.5 NEWS DESK : ಕಾಡಾನೆ ದಾಳಿಯಿಂದ ಮೃತಪಟ್ಟ ಕುಂಜಿಲ ಕಕ್ಕಬೆ ಗ್ರಾ.ಪಂ ವ್ಯಾಪ್ತಿಯ ನಾಲಡಿ ಗ್ರಾಮದ ನಿವಾಸಿ ಕಂಬೆಯಂಡ ದೇವಯ್ಯ ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರದ ಚೆಕ್ ವಿತರಿಸಲಾಯಿತು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಸ್ಸೀನ್ ಬಾಷಾ, ಭಾಗಮಂಡಲ ವಲಯ ಅರಣ್ಯಾಧಿಕಾರಿ ಟಿ.ಎಂ.ರವೀಂದ್ರ, ಉಪವಲಯ ಅರಣ್ಯ ಅಧಿಕಾರಿ ಕಾಳೇಗೌಡ ಮೃತರ ಪತ್ನಿ ನಳಿನಿ, ಮಗ ಅಕ್ಷತ್ ಮುತ್ತಣ್ಣ ಅವರಿಗೆ 15 ಲಕ್ಷ ರೂಪಾಯಿಯ ಪರಿಹಾರದ ಚೆಕ್ ವಿತರಿಸಿ, ಮಾಸಿಕ 4000 ಪಿಂಚಣಿಯ ಸೌಲಭ್ಯ ಕಲ್ಪಿಸಿದರು.
ವರದಿ : ದುಗ್ಗಳ ಸದಾನಂದ.