ಮಡಿಕೇರಿ ಏ.4 NEWS DESK : ವಯೋವೃದ್ಧರಿಗೆ ಆರೈಕೆ ಕೇಂದ್ರಗಳ ಸ್ಥಾಪನೆ ಮತ್ತು ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ನೂತನವಾಗಿ ನೋಂದಾಯಿತ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ್ನು ಸ್ಥಾಪಿಸಿರುವುದಾಗಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಟ್ರಸ್ಟ್ ನ ಟ್ರಸ್ಟಿಗಳಾಗಿ ಸುಂಟಿಕೊಪ್ಪದ ಏಳನೇ ಹೊಸಕೋಟೆಯ ಸೌಮ್ಯಶ್ರೀ, ಮಡಿಕೇರಿಯ ಕೆ.ಎಂ.ಚೇತನ್, ಮೈಸೂರಿನ ಲೇನರ್ಡ ಜೋಸೆಫ್ ಬ್ಯಾಸ್ಟೀನ್, ನಾಗೇಂದ್ರ.ಕೆ, ಗೌರವ ಅಧ್ಯಕ್ಷರಾಗಿ ಬಿಗ್ ಬಾಸ್ ಖ್ಯಾತಿಯ ಸ್ನೇಕ್ ಶ್ಯಾಮ್ ಹಾಗೂ ಕಾನೂನು ಘಟಕದ ಮುಖ್ಯಸ್ಥೆಯಾಗಿ ವಕೀಲರಾದ ಮೊನಾಲಿಸಾ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಪ್ರಕ್ರಿಯೆ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು, ಇದರ ಉದ್ದೇಶಗಳನ್ನು ಸರ್ಕಾರ ಮಾನ್ಯ ಮಾಡಿದೆ. ವಯಸ್ಸಾದ ವ್ಯಕ್ತಿಗಳಿಗೆ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದು ಸಂಸ್ಥೆಯ ಮುಖ್ಯ ಯೋಜನೆಯಾಗಿದೆ.
ಅನಾಥಾಶ್ರಮವನ್ನು ನಿರ್ಮಾಣ ಮಾಡಿ ಕಷ್ಟದ ಪರಿಸ್ಥಿತಿಯಲ್ಲಿರುವವರು ಹಾಗೂ ವಯಸ್ಸಾದ ವ್ಯಕ್ತಿಗಳಿಗೆ ಆಶ್ರಯ, ಉಚಿತ ಊಟ, ಬಟ್ಟೆ ಮತ್ತು ಮಾನಸಿಕ ನೆಮ್ಮದಿಯನ್ನು ನೀಡಲಾಗುವುದು. ದೈಹಿಕ, ಮಾನಸಿಕ ಅಶಕ್ತರು ಮತ್ತು ವಿಕಲಚೇತನ ಮಕ್ಕಳಿಗೆ ನೇರವಾಗಿ ಅವರ ಪುನರ್ವಸತಿಗೆ ಸಹಾಯ ಮಾಡಲಾಗುವುದು.
ಶಿಕ್ಷಣದ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಪುನರ್ವಸತಿ ಮತ್ತು ಸರ್ಕಾರದ ಕಾರ್ಯಕ್ರಮದೊಂದಿಗೆ ಕೈಜೋಡಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ಟ್ರಸ್ಟ್ ನ ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ತಯಾರಾಗುತ್ತಿದ್ದು, ಇದರ ಪ್ರಯೋಜನವನ್ನು ನಿರಾಶ್ರಿತರು, ಬಡವರು, ಭಿಕ್ಷುಕರು, ನೊಂದವರು ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಹೆಲ್ಪ್ ಲೈನ್ ನ್ನು ಕೂಡ ಪ್ರಾರಂಭಿಸಲಾಗುವುದು ಎಂದು ಶಿವಕುಮಾರ್ ಹೂಟಗಳ್ಳಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9481332181, 9739973947 ನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
Breaking News
- *ಮಡಿಕೇರಿಯಲ್ಲಿ ಗೀತ ನಮನದ ಮೂಲಕ ಗಾಂಧೀಜಿ ಸ್ಮರಣೆ*
- *ಆತ್ಮಹತ್ಯೆ ಬೇಡ : ಸರ್ಕಾರ ನಿಮ್ಮ ಜೊತೆಗಿದೆ : ಕಂಪ್ಲೇಂಟ್ ಕೊಡಿ : ಸಿಎಂ ಸಿದ್ದರಾಮಯ್ಯ ಕರೆ*
- *ಸುತ್ತೂರು ಮಠದ ಮಹದೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ*
- *ಸುಂಟಿಕೊಪ್ಪ : ಸ್ವರ್ಣಾಲಯದಲ್ಲಿ ಗಾಂಧಿ ಸ್ಮರಣೆ*
- *ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿಗೆ ಕೆ.ಎಸ್.ಮೂರ್ತಿ ಆಯ್ಕೆ*
- *ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಗೆ ಸಿ.ಎಂ.ಚಿಣ್ಣಪ್ಪ ಆಯ್ಕೆ*
- *ತೀರ್ಪುಗಾರರಾಗಿ ಕೊಡಗಿನ ಹರ್ಷಿತ್ ಅಯ್ಯಪ್ಪ ನೇಮಕ*
- *ಭಾಗಮಂಡಲ ಮೇಲ್ಸೇತುವೆಗೆ ಕೆದಂಬಾಡಿ ರಾಮಯ್ಯ ಗೌಡರ ಹೆಸರಿಡಲು ಮನವಿ*
- *ಹಿಂದು ಯುವ ಸಮೂಹದ ಜಾಗೃತಿಗಾಗಿ ಮಡಿಕೇರಿಯಲ್ಲಿ ಜಾಗೃತಿ ಬೈಕ್ ಜಾಥಾ*
- *ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಪ್ರತಿಷ್ಠಾ ವಾರ್ಷಿಕೋತ್ಸವ : ನೂತನ ರಾಜಗೋಪುರ ಉದ್ಘಾಟನೆ*