ಮಡಿಕೇರಿ ಏ.4 NEWS DESK : ಕರ್ನಾಟಕ ಸಮಸ್ತ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯಲ್ಲಿ ದೇಶ ಉಳಿಸಿ ಸಂಕಲ್ಪ ಯಾತ್ರೆ ನಡೆಯಿತು.
ಏ.8ರ ವರೆಗೆ ನಡೆಯಲಿರುವ ದೇಶ ಉಳಿಸಿ ಸಂಕಲ್ಪ ಯಾತ್ರೆಯ ತಂಡವನ್ನು ನಗರದ ಸುದರ್ಶನ್ ವೃತದಲ್ಲಿ
ಜಮಾಅತೆ ಇಸ್ಲಾಮೀ ಜಿಲ್ಲಾಧ್ಯಕ್ಷ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಮೊಹಮ್ಮದ್ ಮುಸ್ತಫಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಅಬ್ದುಲ್ ಗಪೂರ್, ನಗರ ಸಭಾ ಸದಸ್ಯರುಗಳಾದ ಅಮೀನ್ ಮೊಹ್ಸಿನ್, ಮನ್ಸೂರ್, ದಲಿತಪರ ಹೋರಾಟಗಾರ ನಿರ್ವಾಣಪ್ಪ, ಪ್ರಮುಖರಾದ ಹೇಮಂತ್, ಲಕ್ಷ್ಮಣ ಬರಮಾಡಿಕೊಂಡರು.
ನಂತರ ನಗರದ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಿದರು.
ಈ ಸಂದರ್ಭ ಯಾತ್ರೆಯ ಸಂಯೋಜಕ ಆರ್.ನಾಗೇಶ್ ಅರಳಕುಪ್ಪೆ, ಹಿರಿಯ ಸಾಹಿತಿ ಡಾ. ಮುಕುಂದ ರಾಜ್, ಸಮಾಜ ಸೇವಕ ಡಾ ರಮೆಶ್ ಬೆಲಂಕೊಂಡ ಹಾಜರಿದ್ದರು.