NEWS DESK : ಶೋಭಕೃತ್ ನಾಮಸಂವತ್ಸರದ ಪಾಲ್ಗುಣ ಮಾಸದ ಕೊನೆಯ ಅಮಾವಾಸ್ಯೆಯಂದು ಅತ್ಯಂತ ಕಠೋರವಾದ ಸೂರ್ಯನ ಮೈತುಂಬಾ ಕತ್ತಲೆ ವ್ಯಾಪಿಸುವ ವರ್ಷದ ಮೊದಲ ಸೂರ್ಯಗ್ರಹಣ 2024 ಏಪ್ರಿಲ್ 8 ರಂದು ಸೋಮವಾರ ಸಂಭವಿಸಲಿದೆ.
ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಉತ್ತರ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಗ್ರಹಣ ಸಂಭವಿಸುವ ಸಮಯ ಭಾರತದ ಕಾಲಮಾನದಲ್ಲಿ ಸೋಮವಾರ ರಾತ್ರಿ 9:13 ಗಂಟೆಯಿಂದ ರಿಂದ 2.22 ವರೆಗೆ. ಭಾರತ ದೇಶದಲ್ಲಿ ಗ್ರಹಣ ಗೋಚರಿಸದೆ ಇದ್ದರೂ ಕೆಲವು ರಾಶಿ, ನಕ್ಷತ್ರಗಳ ಮೇಲೆ ಗ್ರಹಣ ಪರಿಣಾಮ ಬೀರಲಿದೆ. ಗ್ರಹಣದ ದಿನ ರೇವತಿ ನಕ್ಷತ್ರವಿದ್ದು, ರೇವತಿ ನಕ್ಷತ್ರ ಮೀನ ರಾಶಿಯವರಿಗೆ ಶನಿಬಾಧಕವು ಹೆಚ್ಚಾಗಲಿದೆ. ಬಂಧು ಕಲಹ, ಪ್ರಯಾಣದಲ್ಲಿ ಅಡೆತಡೆ, ವ್ಯವಹಾರದಲ್ಲಿ ನಷ್ಟ, ಮಾನಸಿಕ ವೇದನೆ ಆಗಲಿದೆ.
ವೃಶ್ಚಿಕ ಲಗ್ನದಲ್ಲಿ ಗ್ರಹಣ ಸ್ಪರ್ಶವಾಗುವುದರಿಂದ ವೃಶ್ಚಿಕ ರಾಶಿಯವರಿಗೆ ವಿವಿಧ ಕ್ಷೇತ್ರದಲ್ಲಿ ಹಿನ್ನಡೆಯಾಗಲಿದೆ. ಮಾನಸಿಕ ವೇದನೆ ಎದುರಾಗಲಿದೆ, ಮನಸ್ತಾಪದಿಂದ ಆತ್ಮೀಯರು ದೂರವಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಸಾಲಗಾರರ ಒತ್ತಡ ಹೆಚ್ಚಲಿದೆ. ಈ ನಕ್ಷತ್ರದವರಿಗೆ ಮತ್ತು ರಾಶಿಯವರಿಗೆ ತೊಂದರೆ ಉಂಟಾದರೆ ಮಕರ ರಾಶಿಯವರಿಗೆ ಶುಭಲಾಭವಿದೆ. ಕಾರಣ ಮಕರ ಲಗ್ನದಲ್ಲಿ ಗ್ರಹಣ ಮುಕ್ತಿ ಹೊಂದಲಿದೆ. ತುಂಬಾ ಸಂಚಾರ ಯೋಗವಿದ್ದರೂ ಮಾನಸಿಕ ನೆಮ್ಮದಿ ಇರಲಿದೆ. ರೋಗದಿಂದ ಮುಕ್ತಿ ದೊರೆಯಲಿದೆ ಹಾಗೂ ಉದ್ಯೋಗ ಪ್ರಾಪ್ತಿಯಾಗಲಿದೆ.
::: ದೋಷ ನಿವಾರಣೆ :::
ದೋಷ ಇರುವ ರಾಶಿ, ನಕ್ಷತ್ರದವರು ದೋಷ ನಿವಾರಣೆಗಾಗಿ ಏ.8 ಸೋಮವಾರದಂದು ಬೆಳಿಗ್ಗೆ ತಲೆಯಿಂದ ಸ್ನಾನ ಮಾಡಿ ಶಿವ ದೇವಾಲಯ ದರ್ಶನ ಪಡೆದು ತುಪ್ಪದ ದೀಪವನ್ನು ಹಚ್ಚಬೇಕು. ಶುದ್ಧ ಆಹಾರದಲ್ಲಿದ್ದು ಸಂಜೆ ಲಘು ಆಹಾರವನ್ನು ಸ್ವೀಕರಿಸಬೇಕು. ನಂತರ ಏಪ್ರಿಲ್ 9ರಂದು ಮಂಗಳವಾರ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಎದ್ದು ತಲೆಯಿಂದ ಸ್ನಾನ ಮಾಡಬೇಕು. ಗ್ರಹಣ ಪ್ರಾಯಶ್ಚಿತವಾಗಿ ರೇವತಿ ನಕ್ಷತ್ರ ಮೀನ ರಾಶಿಯವರು ಹಾಗೂ ವೃಶ್ಚಿಕ ರಾಶಿಯವರು ಕಡ್ಡಾಯವಾಗಿ ದೇವಾಲಯಕ್ಕೆ ತೆರಳಿ ಒಂದು ಕೆ.ಜಿ ಗೋಧಿ, ಕಾಲು ಕೆ.ಜಿ ಉದ್ದು, ಕಾಲು ಕೆ.ಜಿ ಹುರುಳಿ ಕಾಳು, ಎಲೆ ಅಡಿಕೆ, ಬಾಳೆಹಣ್ಣನ್ನು ದಕ್ಷಿಣೆ ಸಹಿತ ದಾನವಾಗಿ ನೀಡಬೇಕು.
ಸೂರ್ಯಗ್ರಹಣ ಸಂಭವಿಸುವ ಸೋಮವಾರದ ಅಮಾವಾಸ್ಯೆ ಅತ್ಯಂತ ಕಠಿಣ ಎಂದು ಜ್ಯೋತಿಷ್ಯ ಶಾಸ್ತç ಹೇಳುತ್ತದೆ. ಸರ್ವರೂ ಸರ್ವಶಕ್ತನಾದ ಶಿವನನ್ನು ಆರಾಧಿಸುವ ಮೂಲಕ ಸಂಕಷ್ಟಗಳನ್ನು ದೂರ ಮಾಡೋಣ. (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429)
Breaking News
- *ಸೋಮವಾರಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ*
- *ವಿರಾಪೇಟೆ : ಕಾವೇರಿ ಶಾಲೆಯಲ್ಲಿ ಸಂಸ್ಥಾಪಕರ ದಿನ ಆಚರಣೆ*
- *ವಿರಾಜಪೇಟೆ : ನ.21 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ನ.21 ರಂದು ಮಡಿಕೇರಿಯ ವಿದ್ಯುತ್ ವ್ಯತ್ಯಯ*
- *ಕೊಡಗು : ಡಿ.13 ರಂದು ರಾಷ್ಟ್ರೀಯ ಲೋಕ ಅದಾಲತ್*
- *ಸೋಮವಾರಪೇಟೆ : ಆರೋಗ್ಯ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರ*
- *ಸೋಮವಾರಪೇಟೆ : ಇಂದಿರಾ ಕ್ಯಾಂಟೀನ್ ಕಾಮಗಾರಿ ಅಪೂರ್ಣ : ಅಸಮಾಧಾನ*
- *ಡಿಜಿಟಲ್ ಸಾಕ್ಷರತೆ ಮಹಿಳೆಯರ ಬದುಕಿಗೆ ಸಹಕಾರಿಯಾಗಲಿದೆ : ಆನಂದ್ ಪ್ರಕಾಶ್ ಮೀನಾ*
- *ಸೋಮವಾರಪೇಟೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ದಿನಾಚರಣೆ*
- *ಸುಂಟಿಕೊಪ್ಪ : ಅಪ್ರಾಪ್ತರಿಗೆ ವಾಹನ ನೀಡಿದರೆ ಪೋಷಕರಿಗೆ ಶಿಕ್ಷೆ*