ಮಡಿಕೇರಿ ಏ.7 NEWS DESK : ಗಾಂಧೀಜಿ ಅನುಯಾಯಿಯಾಗುವುದು ಸುಲಭವಲ್ಲದ ದಿನಗಳಲ್ಲಿ ಗಾಂಧೀಜಿ ತತ್ವಾದಶ೯ಗಳನ್ನು ಜೀವನದಲ್ಲಿ ಹಾಸುಹೊಕ್ಕಾಗಿಸಿ ಸರಳವಾಗಿ ಆದಶ೯ಪ್ರಾಯವಾಗಿ ಬದುಕಿದ ಹಿರಿಮೆ ಕೂತಂಡ ಪಾವ೯ತಿ ಪೂವಯ್ಯ ಅವರಿಗೆ ಸಲ್ಲಬೇಕೆಂದು ಹಿರಿಯ ಪತ್ರಕತ೯ ಕೆ.ಬಿ.ಗಣಪತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಆಯೋಜಿತ ಕೂತಂಡ ಪಾವ೯ತಿ ಪೂವಯ್ಯ ಅವರ ಕುರಿತಾದ ಅವ್ವ ಪುಸ್ತಕ ಲೋಕಾಪ೯ಣೆಗೊಳಿಸಿ ಮಾತನಾಡಿದ ಕೆ.ಬಿ.ಗಣಪತಿ, ಪಂದ್ಯಂಡ ಗಣಪತಿಯವರು ಅಂದಿನ ಕಾಲದಲ್ಲಿ ಕೊಡಗಿನ ಗಾಂಧಿ ಎಂದು ಖ್ಯಾತರಾಗಿದ್ದರೆ ಕೂತಂಡ ಪೂವ೯ತಿ ಪೂವಯ್ಯ ಅವರು ಕೊಡಗಿನ ಸರೋಜಿನಿ ನಾಯ್ದು ಎಂದು ಹೆಸರುವಾಸಿಯಾಗಿದ್ದರು ಎಂದು ಸ್ಮರಿಸಿಕೊಂಡರು. ಕೂತಂಡ ಪಾವ೯ತಿ ಅವರನ್ನು ಪ್ರತ್ಯಕ್ಷ ಕಂಡವುರು ಕೆಲವೇ ಕೆಲವರಾದರೂ ಪಾವ೯ತಿ ಅವರ ಜೀವನಾದಶ೯ಗಳನ್ನು ಅರಿತವರು ಅನೇಕರಿದ್ದಾರೆ. ತನ್ನ ಬರವಣಿಗೆ ಮೂಲಕ ಕೊಡವರಂಥ ಸಣ್ಣ ಸಮುದಾಯವನ್ನು ಭಾರತಾದ್ಯಂತ ಪ್ರಚುರಪಡಿಸಿದ ಕೀತಿ೯ ಅಂದಿನ ಕಾಲದ ಅಗ್ರ ಮಹಿಳಾ ಲೇಖಕಿಯಾಗಿದ್ದ ಪಾವ೯ತಿ ಪೂವಯ್ಯನವರಿಗೆ ಸಲ್ಲುತ್ತದೆ ಎಂದು ಗಣಪತಿ ಶ್ಲಾಘಿಸಿದರು.
ಕೊಡವ, ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಹಿಡಿತ ಹೊಂದುವ ಮೂಲಕ ಅಂದಿನ ಕಾಲಘಟ್ಟದಲ್ಲಿಯೇ ಕೊಡಗಿನ ಪ್ರಥಮ ಮಹಿಳಾ ಲೇಖಕಿಯಾಗಿ ಪಾವ೯ತಿ ಪೂವಯ್ಯ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದೂ ಗಣಪತಿ ಬಣ್ಣಿಸಿದರು. ಸಾಹಿತಿಯಾದಂತೆಯೇ ಜೀವನದಲ್ಲಿಯೂ ತನ್ನದೇ ಆದಶ೯ ಹೊಂದಿದ್ದ ಪಾವ೯ತಿ ಓವ೯ ಮಾದರಿ ತಾಯಿ ಕೂಡ ಆಗಿ ಕುಟುಂಬವನ್ನು ಅಚ್ಚುಕಟ್ಟಾಗಿ ನಿವ೯ಹಿಸುತ್ತಾ ಬಂದದ್ದೂ ಹೆಗ್ಗಳಿಕೆಯಾಗಿದೆ ಎಂದೂ ಗಣಪತಿ ಹೇಳಿದರು.
ಮಡಿಕೇರಿಯ ಹಿರಿಯ ವೈದ್ಯ ಡಾ.ಎಂ.ಜಿ. ಪಾಟ್ಕರ್ ಮಾತನಾಡಿ, ಅವ್ವ ಎಂಬುದು ಸರಳ ಶಬ್ದವಾಗಿದ್ದರೂ ಅವ್ವ ಪದ ನೀಡುವ ಅಥ೯ ವಿಶಾಲವಾದದ್ದು ಎಂದರಲ್ಲದೇ, ಕೂತಂಡ ಪಾವ೯ತಿ ಪೂವಯ್ಯ ಅವರು ಜೀವಿಸಿದ್ದ ಕಾಲದಲ್ಲಿ ಭಾರತ ಅತ್ಯಂತ ಸಂಕಷ್ಟದ ದಿನಗಳನ್ನು ಕಂಡಿತ್ತು, ಬಡತನ ಎಲ್ಲಾ ಕಡೆ ತಾಂಡವವಾಡಿತ್ತು. ಇಂಥ ದಿನಗಳಲ್ಲಿಯೂ ಸಾಹಿತ್ಯ ಶ್ರೀಮಂತಿಕೆ ಮೆರೆದವರು ಪಾವ೯ತಿಯಾಗಿದ್ದರು ಎಂದು ಹೇಳಿದರು.
ಪ್ರಕೖತ್ತಿ ನಾಶ ಇಂದಿನ ಸಮಾಜದ ಮುಂದಿರುವ ಬಹಳ ದೊಡ್ಡ ಸವಾಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಡಾ. ಪಾಟ್ಕರ್, ನಿಸಗ೯ದ ನಾಶದೊಂದಿಗೆ ಮನುಷ್ಯತ್ವ, ಮಾನವೀಯತೆಯೆ ನಾಶ ಕೂಡ ಉಂಟಾಗುತ್ತದೆ ಎಂದೂ ಎಚ್ಚರಿಸಿದರು.
ಅವ್ವ ಕೖತಿಯ ಲೇಖಕಿ ಡಾ.ನಯನ ಕಶ್ಯಪ್ ಮಾತನಾಡಿ, ಪೂವ೯ತಿ ಪೂವಯ್ಯ ಅವರ ಜೀವನ ಮತ್ತು ಲೇಖನ ಎರಡೂ ಸರಳವಾಗಿತ್ತು. ಹೀಗಾಗಿಯೇ ಅವರು ಜನಮಾನಸದಲ್ಲಿ ಸ್ಮರಣೀಯವಾಗಿ ಉಳಿದರು ಎಂದರಲ್ಲದೇ, ಆ ಕಾಲದ ಆಶೋತ್ತರಳನ್ನು ಅಥ೯ ಮಾಡಿಕೊಂಡು ಲೇಖನಗಳನ್ನು ಬರೆದದ್ದು ಕೂತಂಡ ಪಾವ೯ತಿ ಪೂವಯ್ಯ ಅವರ ಹೆಗ್ಗಳಿಕೆಯಾಗಿದೆ ಎಂದರು. ಸಾಹಿತ್ಯ ಎಂದಿಗೂ ಘನಗಾಂಭೀಯ೯ದಿಂದ ಕೂಡಿರಬೇಕಾಗಿಲ್ಲ. ಸರಳ ರೂಪದಲ್ಲಿಯೂ ಓದುಗನನ್ನು ಚಿಂತನೆಗೆ ಒಳಪಡಿಸುವುದೇ ನಿಜವಾದ ಸಾಹಿತ್ಯ ಎಂದು ನಯನ ಹೇಳಿದರು.
ತನ್ನ ತಾಯಿ ಪಾವ೯ತಿ ಕುರಿತಂತೆ ಕೂತಂಡ ಉತ್ತಪ್ಪ ಕೆಲವೊಂದು ನೆನಪುಗಳನ್ನು ಸಭಿಕರ ಮುಂದಿಟ್ಟರು. ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ಸಭೆಯಲ್ಲಿ ಮಾತನಾಡಿದರು. ದೀಪಿಕಾ ಅಪ್ಪಯ್ಯ ನಿರೂಪಿಸಿ, ಬಾಲಾಜಿ ಕಶ್ಯಪ್ ವಂದಿಸಿದರು.
::: ಕವಿತೆಗಳ ಮೌಲ್ಯ ಕುಸಿಯುತ್ತಿದೆ :::
ಈಗಿನ ಕವಿತೆಗಳಲ್ಲಿ ಮೌಲ್ಯ ಕುಸಿಯುತ್ತಿದೆ, ತೋಚಿದ್ದು ಗೀಚಿದಂತೆ ಕಂಡು ಬರುತ್ತಿದೆ, ಹೀಗಾಗಿಯೇ ಅಥ೯ಹೀನ ಕವಿತೆಗಳು ಹೆಚ್ಚಾಗುತ್ತಿದೆ. ಹೀಗಿರುವಾಗ ಅಂದಿನ ಕಾಲಮಾನದಲ್ಲಿಯೇ ಮೌಲ್ಯ, ಸತ್ವಯುತ ಕವನ, ಲೇಖನಗಳನ್ನು ಬರೆದ ಕೂತಂಡ ಪಾವ೯ತಿ ಪೂವಯ್ಯ ಸದಾ ಆದಶ೯ಪ್ರಾಯರಾಗುತ್ತಾರೆ. – ಡಾ..ಎಂ..ಜಿ. ಪಾಟ್ಕರ್, ಹಿರಿಯ ವೈದ್ಯರು. ಮಡಿಕೇರಿ.
Breaking News
- *ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ*
- *ನ.23 ರಂದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಬಹುಮಾನ ದಿನ*
- *ಬ್ರೆಜಿಲ್ನಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ*
- *ಸೋಮವಾರಪೇಟೆ : ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಅಂಗಾರಕ ಸಂಕಷ್ಟಿ ಪೂಜೆ*
- *ಕರಿಕೆಯಲ್ಲಿ ಇನ್ನೂ ಸೆರೆಯಾಗದ ಚಿರತೆ : ಮತ್ತೆ ಸಾಕುನಾಯಿ ಮೇಲೆ ದಾಳಿ : ಬೋನ್ ಅಳವಡಿಸುವ ಭರವಸೆ*
- *ಸೋಮವಾರಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ*
- *ವಿರಾಪೇಟೆ : ಕಾವೇರಿ ಶಾಲೆಯಲ್ಲಿ ಸಂಸ್ಥಾಪಕರ ದಿನ ಆಚರಣೆ*
- *ವಿರಾಜಪೇಟೆ : ನ.21 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ನ.21 ರಂದು ಮಡಿಕೇರಿಯ ವಿದ್ಯುತ್ ವ್ಯತ್ಯಯ*
- *ಕೊಡಗು : ಡಿ.13 ರಂದು ರಾಷ್ಟ್ರೀಯ ಲೋಕ ಅದಾಲತ್*