ಮಡಿಕೇರಿ ಏ.27 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಪ್ರಯುಕ್ತ ಇಂದು ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ (ಮುತ್ತನೂರ್ ತಂಙಳ್) ನೇತೃತ್ವದಲ್ಲಿ ದ್ಸಿಕ್ರ್ ಹಲ್ಖಾ ಮತ್ತು ಮತ ಪ್ರವಚನ ನಡೆಯಿತು.
ಮುಳ್ಳೂರ್ಕೆರೆ ಮುಹಮ್ಮದ್ ಅಲಿ ಸಖಾಫಿ “ಆಧುನಿಗ ಯುಗತ್ತಿಲ್ ಇಸ್ಲಾಮಿಂಡೆ ಪ್ರಶಸ್ವಿ: ಎಂಬ ವಿಷಯದ ಕುರಿತು ಮಾತನಾಡಿದರು.
ಏ.28ರ ಕಾರ್ಯಕ್ರಮದ ವಿವರ :: ಏ.28 ರಂದು ಮಗ್ರಿಬ್ ನಮಾಝಿನ ಬಳಿಕ ಖತಂ ದುಆ ಮಜ್ಲಿಸ್ ನಡೆಯಲಿದ್ದು, ಇದರ ನೇತೃತ್ವವನ್ನು ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ ಎಮ್ಮೆಮಾಡಿ (ಕಿಲ್ಲೂರ್ ತಂಙಳ್) ವಹಿಸಲಿದ್ದಾರೆ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ “ಕುಟುಂಬ ಜೀವಿದಂ” ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.
ವೇದಿಕೆಯಲ್ಲಿ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸದಸ್ಯರಾದ ಸಯ್ಯಿದ್ ಶರಫುದ್ದೀನ್ ಹಿಮಮಿ ಅಲ್ ಹೈದರೂಪಿ ಎಮ್ಮೆಮಾಡು, ಅಬ್ದುಲ್ ಲತೀಫ್ ಕೂರುಳಿ, ಸಯ್ಯಿದ್ ಝೈನುದ್ದೀನ್ ಸಖಾಫಿ ಅಲ್ ಹೈದರೂಪಿ, ಎಮ್ಮೆಮಾಡು ಶಹೀದಿಯ ಅನಾಥಾಲಯದ ಉಪಾಧ್ಯಕ್ಷ ಉಮರ್ ಹಾಜಿ ಕನ್ನಡಿಯಂಡ ಉಪಸ್ಥಿತರಿರಲಿದ್ದಾರೆ.