
ಮಡಿಕೇರಿ ಏ.30 NEWS DESK : ಮತ್ತಿಕಾಡು ಅತ್ತೂರು ನಲ್ಲೂರು ಗ್ರಾಮದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಪುಣ್ಯಾಹ ಕಲಶ ಪೂಜೆ, ಗಣಪತಿ ಹೋಮ, ದುರ್ಗಾಹೋಮ, ಮಹಾ ಕಲಶಾಭಿಷೇಕ ಜರುಗಿತು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿಯ ನಂತರ ಅಪಾರ ಸಂಖ್ಯೆಯ ಭಕ್ತರಿಗೆ ಅನ್ನಸಂತರ್ಪಣೆಯಾಯಿತು. ಸಂಜೆ ಮಹಾರಂಗ ಪೂಜೆಯ ಮೂಲಕ ದೇವಾಲಯದ ವಾರ್ಷಿಕೋತ್ಸವ ಸಂಪನ್ನಗೊಂಡಿತು.








