ವಿರಾಜಪೇಟೆ ಮೇ 4 NEWS DESK : ವಿರಾಜಪೇಟೆಯ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ ಚಿಣ್ಣರ ನಲಿಕಲಿ ಉಚಿತ ಬೇಸಿಗೆ ಶಿಬಿರವು ಸಮಾರೋಪಗೊಂಡಿತು.
ಸುಮಾರು 25 ದಿವಸಗಳ ಕಾಲ ನಡೆದ ಶಿಬಿರದಲ್ಲಿ ಮಕ್ಕಳಿಗೆ ಯೋಗ, ಕರಾಟೆ, ಕ್ರೀಡೆ, ಕಂಪ್ಯೂಟರ್ ಕಲಿಕೆ, ಡ್ಯಾನ್ಸ್, ಮ್ಯೂಸಿಕ್, ದೈಹಿಕ ಶಿಕ್ಷಣ, ಮುಂತಾದ ವಿಚಾರಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.
ಸಮಾರೋಪದ ದಿನದಂದು ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ವೃದ್ಧಶ್ರಮದ ಹಿರಿಯರನ್ನು ಶಾಲೆಗೆ ಕರೆಯಿಸಿ ಶಾಲಾ ಮಕ್ಕಳಿಂದ ಮನೋರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಮಕ್ಕಳು ತಮ್ಮ ಕಾರ್ಯಕ್ರಮಗಳ ಮೂಲಕ ಹಿರಿಯರನ್ನು ರಂಜಿಸಿದರು. ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರು ಹಾಗೂ ಸಮಾಜ ಸೇವಕಿ ಪೂಜಾ ರವೀಂದ್ರ ಅವರು ಹಿರಿಯರನ್ನು ಸನ್ಮಾನಿಸಿ ಗೌರವಿಸಿದರು. ಮತ್ತು ಹೆಗ್ಗಳ ವೃದ್ಧಶ್ರಮಕ್ಕೆ ಏರ್ ಕೂಲರ್ ನ್ನು ಕೊಡುಗೆಯಾಗಿ ನೀಡಲಾಯಿತು.
ನಂತರ ಶಾಲಾ ಮಕ್ಕಳನ್ನು ಹೆಗ್ಗಳದ ಗೋಲ್ಡನ್ ಬೀನ್ ರೆಸಾರ್ಟ್ ಗೆ ಕ್ಷೇತ್ರ ಭೇಟಿಗಾಗಿ ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಪ್ರತಿಮಾ ರಂಜನ್, ಶಿಕ್ಷಕರು, ಸಿಬ್ಬಂದಿಗಳು, ವೃದ್ಧಾಶ್ರಮದ ಸಿಬ್ಬಂದಿಗಳು, ಮಕ್ಕಳು ಪಾಲ್ಗೊಂಡಿದ್ದರು.