ಮಡಿಕೇರಿ ಮೇ 5 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ಭಾನುವಾರದ ಮೊದಲ ಪಂದ್ಯದಲ್ಲಿ ವೈಲ್ಡ್ ಫ್ಲವರ್ ತಂಡ 16 ರನ್ಗಳ ಅಂತರದಿಂದ ಎದುರಾಳಿ ಅಂಜಿಗೇರಿ ನಾಡ್ ತಂಡವನ್ನು ಮಣಿಸಿತು.
ಟಾಸ್ ಗೆದ್ದ ಅಂಜಿಗೇರಿ ನಾಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೈಲ್ಡ್ ಫ್ಲವರ್ ತಂಡ 20 ಓವರ್ ಗಳಳ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳನ್ನು ದಾಖಲಿಸಿತು. ನಂತರ ಬ್ಯಾಟಿಂಗ್ ಮಾಡಿದ ಅಂಜಿಗೇರಿ ನಾಡ್ ತಂಡ 18.4 ಓವರ್ ಗಳಲ್ಲಿ 128 ರನ್ ಗಳನಷ್ಟೇ ಗಳಿಸಿತು. 21 ರನ್ ಗಳಿಸಿ, 3 ವಿಕೆಟ್ ಕಬಳಿಸಿದ ವೈಲ್ಡ್ ಫ್ಲವರ್ ತಂಡದ ನಿತಿನ್ ಬೋಪಣ್ಣ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗಳಿಸಿದರು.