ಮಡಿಕೇರಿ ಮೇ 14 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2024-25 ರ ಸಾಲಿನ ಪ್ರಥಮ ವರ್ಷದ ಬಿ.ಎ(ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡ ಐಚ್ಛಿಕ), ಬಿ.ಕಾಂ ಮತ್ತು ಬಿ ಬಿ ಎ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.
ಕಾಲೇಜು ಸುಸಜ್ಜಿತವಾದ ತರಗತಿ ಕೊಠಡಿಗಳನ್ನು ಮತ್ತು ನುರಿತ ಬೋಧಕರನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಶ್ಯಕತವಿರುವ 14,000 ಪುಸ್ತಕಗಳನ್ನು ಹೊಂದಿರುವ ವಿಶಾಲವಾದ ಗ್ರಂಥಾಲಯ, ಇ-ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೌಲಭ್ಯ, ವೈಫೈ ಸೌಲಭ್ಯ, ಸಿ.ಸಿ.ಕ್ಯಾಮರಾ ಕಣ್ಗಾವಲಿನಲ್ಲಿರುವ ಸುಸಜ್ಜಿತ ಕಟ್ಟಡ, ಮಹಿಳಾ ದೌರ್ಜನ್ಯ ನಿರ್ಮೂಲನಾ ಸಮಿತಿ, ಮಾದಕ ವಸ್ತು ನಿರ್ಮೂಲನಾ ಸಮಿತಿ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಆಧುನಿಕ ರೀತಿಯ ಬೋಧನಾ ಕ್ರಮ, ಉದ್ಯೋಗ ಮಾರ್ಗ ದರ್ಶನ ಕೇಂದ್ರ, ವಿದ್ಯಾರ್ಥಿ ನಿಲಯ, ಕ್ಯಾಂಟೀನ್ ವ್ಯವಸ್ಥೆ, ಇಕೋಕ್ಲಬ್,ವಿದ್ಯಾರ್ಥಿ ಭ್ರಾತೃತ್ವ ವೇದಿಕೆ, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಸಂಘ, ಅಂತರಕಾಲೇಜು ವಿದ್ಯಾರ್ಥಿಗಳ ಕಲಿಕಾ ವಿನಿಮಯ ಕಾರ್ಯಕ್ರಮಗಳು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ, ಎನ್‍ಎಸ್‍ಎಸ್, ರೋವರ್ಸ್, ರೇಂಜರ್ಸ್, ರೆಡ್ ಕ್ರಾಸ್ ಮುಂತಾದ ಘಟಕಗಳು ಕಾರ್ಯನಿರತವಾಗಿದೆ.
ಎಲ್ಲಾ ವರ್ಗದ ವಿದ್ಯಾರ್ಥಿನಿಯರಿಗೆ ಶುಲ್ಕ ಮರುಭರಣೆಯ ಸೌಲಭ್ಯವಿದೆ. ಎಲ್ಲಾ ತರಗತಿ ಕೊಠಡಿಗಳಲ್ಲಿ ಐ ಸಿ ಟಿ ಸೌಲಭ್ಯವಿದೆ. ಕರ್ನಾಟಕ ಸರ್ಕಾರದ ಎಲ್.ಎಂ.ಎಸ್ ಯೋಜನೆಯು ಜಾರಿಯಲ್ಲಿರುತ್ತದೆ. ಹೆಚ್ಚಿನ ಮಾಹಿತಿಗೆ 08272-255110, 9449766772, 7022289931, 9902817541 ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ.ದಯಾನಂದ ತಿಳಿಸಿದ್ದಾರೆ.