ಮಡಿಕೇರಿ ಮೇ 24 NEWS DESK : ಕೊಡಗು ಧಮ ವಿಜಯ ಸಂಘಟನೆ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ್, ತಿಶರಣ ಹಾಗೂ ಪಂಚಶೀಲ ತತ್ವಗಳನ್ನು ಹೇಗೆ ಮತ್ತು ಏಕೆ ಪಾಲಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ನಮ್ಮ ಎಲ,್ಲ ಸುಖ ಹಾಗೂ ದುಃಖಗಳಿಗೆ ಕಾರಣವಾದ ನಮ್ಮ ಮನಸ್ಸನ್ನು ಯಾವ ರೀತಿಯಲ್ಲಿ ತರಬೇತಿಗೊಳಿಸಬೇಕು ಎಂದು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಶೋಕ್‍ಪುರ ಅನ್ನಪೂರ್ಣ ಸಮಿತಿಯ ಅಧ್ಯಕ್ಷ ಜಯರಾಮ್ ನಗರದ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್, ನಗರಸಭಾ ಸದಸ್ಯರಾದ ಶಾರದಾ ನಾಗರಾಜು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ.ಜಾತಿ ನೌಕರರ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ವೈದ್ಯರಾದ ಡಾ.ಪ್ರಕಾಶ್, ಡಾ.ಆನಂದ್, ಧಮ್ಮ ವಿಜಯ ಸಂಘಟನೆಯ ಹಿರಿಯ ಸದಸ್ಯ ಶಾಮ್, ನಗರ ಸಭೆಯ ಮಾಜಿ ಸದಸ್ಯರಾದ ಚಿತ್ರ ದೇವರಾಜು ಮೆಣದ ಬತ್ತಿಹಚ್ಚಿ ಬುದ್ಧ ಪ್ರತಿಮೆ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಸಂಘಟನೆಯ ಸದಸ್ಯರಾದ ಮೋಹನ್ ಮೌರ್ಯ ಸ್ವಾಗತಿಸಿದರು. ದೀಪಕ್ ಪೊನ್ನಪ್ಪ ವಂದಿಸಿದರು.